ದೇವರೇ ನೀನೇಕೆ ಇಷ್ಟು ಕ್ರೂರಿ
ನೀ ಅರಿತು ಮಾಡುತಿರುವೆ ನನಗೆ ನೋವು
ನಾ ಮಾಡಿದ ತಪ್ಪಾದರೂ ಏನು
ತಿಳಿಯದೆ ಈ ಭೂಮಿ ಮೇಲೆ ಜನ್ಮ ತಾಳಿದೆ
ಹುಟ್ಟಿದ ಕ್ಷಣದಿಂದ ಇಲ್ಲಿಯವರೆಗೂ
ಖುಷಿಯೇನೆಂದು ನಾ ಕಾಣೆ
ನೋವಿನ ವಿನಹ ಬೇರೇನೂ ಬದುಕೆ ಇಲ್ಲವೇ ನನಗೆ
ಕಣ್ಣೀರ ಹರಿಸಲೆಂದೇ ಹುಟ್ತಿಸಿದೆಯ ನನ್ನ
ನನ್ನ ನೋವಿನ ಕಣ್ಣೀರಿಗೆ ಕೊನೆಯಿಲ್ಲವಾದರೆ
ಕೊಟ್ಟುಬಿಡು ಈ ಜೀವಕ್ಕೆ ಮುಕ್ತಿಯನ್ನು
No comments:
Post a Comment