ಅಮ್ಮನ ಕಾಣದ ಮನ ನೊಂದ ಮಗುವೊಂದು
ಎಡೆಬಿಡದೆ ಉಸಿರುಗಟ್ಟುವ ಹಾಗೆ ಅಳುತ್ತಲೇ ಇದೆ
ಆ ಅಳುವ ನಿಲ್ಲಿಸಲು ಆ ತಾಯಿ ಎಂದು ಬರುವಳೋ
ಆ ಕಂದನ ಮೊಗವ ನಗುವಿನಿಂದ ಎಂದು ಅರಳುವುದೋ
ಕ್ಷುಲ್ಲಕ ಕಾರಣಗಳಿಗಾಗಿ ಎಂದೂ ತಾಯಿ ಮಗುವ ದೂರ
ಮಾಡುವುದಿಲ್ಲ, ಏಕಾಏಕಿ ಮಗುವ ಬಿಟ್ಟು ಹೋದರೆ ಅದು
ಮಾಡುವುದಾದರೂ ಏನು ಅಳುವ ಹೊರತು
ಈ ಪ್ರಕೃತಿಯೂ ಕೂಡ ಅಮ್ಮನ ಹಾಗೆ, ನಾವೆಲ್ಲರೂ
ಪ್ರಕೃತಿಯ ಮಡಿಲಲ್ಲಿ ಮಲಗುವ ಮಕ್ಕಳಲ್ಲವೇ
ಬದುಕು ಕೊಟ್ಟ ಈ ನಿಸರ್ಗವನ್ನೇ ನಾವು ಕೊಲ್ಲುತ್ತಾ
ಹೋದರೆ ನಮ್ಮ ಕೈ ಬಿಡದೆ ಅದಕ್ಕೆ ಬೇರೆ ದಾರಿ ಇದೆಯೇ
ಅದಕ್ಕೆಂದೇ ಆಗುತ್ತಿಲ್ಲವೇ ಉತ್ತರದಲ್ಲಿ ಜಲಪ್ರಳಯ
ಅದನ್ನು ತಡಿಯಬಹುದಾಗಿತ್ತಲ್ಲವೇ ನಾವು ಇದ್ದಿದ್ದರೆ ನಿಸರ್ಗದ ಸನಿಹ,
ಏನಾದರೂ ಇರಲಿ ಹೇಗಾದರೂ ಇರಲಿ
ಪ್ರಕೃತಿ ಎಂದರೆ ಜನ್ಮ ಕೊಟ್ಟ ಅಮ್ಮನಂತೆ
ಬದುಕ ಕೊಟ್ಟವರನ್ನೇ ಕೊಳ್ಳಲು ಹೊರಟರೆ ಆಗುವುದು
ನಮ್ಮ ಬದುಕಿನ ಸರ್ವನಾಶವೇ ಹೊರತು ಬೇರೇನೂ ಅಲ್ಲ
ಅಮ್ಮನಂತೆ ಪ್ರೀತಿಸಿ ಆರೈಕೆ ಮಾಡೋಣ ನಿಸರ್ಗ ಮಾತೆಯನ್ನು
ಆ ತಾಯಿ ಪಾವನ ಮಾಡುವಳು ನಮ್ಮ ಜೀವನವನ್ನು