ಕಾದು ಕಾದು ಸಾಕಾಯಿತು ನನಗೆ
ಪೂರ್ವದ ದಿನಕರ ಪಶ್ಚಿಮಕ್ಕೆ ಸರಿಯುತ್ತಿದ್ದಾನೆ
ಆದರೂ ನಿನ್ನ ಸುಳಿವಿಲ್ಲ
ನೀನೀಗ ನನ್ನ ಬಳಿ ಇದ್ದಿದ್ದರೆ ನಾ ಹೆಣೆದ
ಹಾಡನ್ನು ನಿನ್ನಿಂದ ಹಾಡಿಸಿ ಆ ಇಂಪಾದ ದನಿಯೊಂದಿಗೆ
ಈ ತಂಪಾದ ಮುಸ್ಸಂಜೆಯ ಸವಿಯುತ್ತಿದ್ದೆ
ಈ ಹೃದಯದ ಒಂದು ಪುಟ್ಟ ಆಸೆಯನ್ನೂ
ಈಡೇರಿಸದೇ ಸತಾಯಿಸುತಿರುವೆ ಹೀಗೇಕೆ
ಇನ್ನೂ ಕಾಡುತಿದೆ ನಿನ್ನ ದನಿ ಕೇಳುವ ಹಂಬಲಿಕೆ
ಮುಂಜಾನೆಯಿಂದ ಮುಸ್ಸಂಜೆ ಆದರೂ ನಾ ಕಾಯುವೆ
ಕತ್ತಲಾಗುವ ಮುನ್ನ ಕೇಳಿಸಿಬಿಡು ನಿನ್ನ ದನಿಯೊಮ್ಮೆ
ಮತ್ತೆ ಮೋಸ ಮಾಡದೇ ಹಾರಿಹೋಗಬೇಡ ಓ ನನ್ನ ಕೋಗಿಲೆಯೇ
ಪೂರ್ವದ ದಿನಕರ ಪಶ್ಚಿಮಕ್ಕೆ ಸರಿಯುತ್ತಿದ್ದಾನೆ
ಆದರೂ ನಿನ್ನ ಸುಳಿವಿಲ್ಲ
ನೀನೀಗ ನನ್ನ ಬಳಿ ಇದ್ದಿದ್ದರೆ ನಾ ಹೆಣೆದ
ಹಾಡನ್ನು ನಿನ್ನಿಂದ ಹಾಡಿಸಿ ಆ ಇಂಪಾದ ದನಿಯೊಂದಿಗೆ
ಈ ತಂಪಾದ ಮುಸ್ಸಂಜೆಯ ಸವಿಯುತ್ತಿದ್ದೆ
ಈ ಹೃದಯದ ಒಂದು ಪುಟ್ಟ ಆಸೆಯನ್ನೂ
ಈಡೇರಿಸದೇ ಸತಾಯಿಸುತಿರುವೆ ಹೀಗೇಕೆ
ಇನ್ನೂ ಕಾಡುತಿದೆ ನಿನ್ನ ದನಿ ಕೇಳುವ ಹಂಬಲಿಕೆ
ಮುಂಜಾನೆಯಿಂದ ಮುಸ್ಸಂಜೆ ಆದರೂ ನಾ ಕಾಯುವೆ
ಕತ್ತಲಾಗುವ ಮುನ್ನ ಕೇಳಿಸಿಬಿಡು ನಿನ್ನ ದನಿಯೊಮ್ಮೆ
ಮತ್ತೆ ಮೋಸ ಮಾಡದೇ ಹಾರಿಹೋಗಬೇಡ ಓ ನನ್ನ ಕೋಗಿಲೆಯೇ
1 comment:
ಕೋಗಿಲೆ ಹಾಡಿದೆ ಕೇಳಿದೆಯಾ ಅಂದಾಗ ನೀವೇ ಕೇಳಿಸಿಕೊಳ್ಳದಂತೆ ಇದ್ದೀರಿ. ಈಗ ಹಂಬಲವೇಕೋ ಕೋಗಿಲೆಯ ಹುಡುಕುತ್ತಾ! ಆದರೂ, ಈಗಲೇ ದೇವರಲ್ಲಿ ಕೇಳಿಕೊಳ್ಳುತ್ತೇನೆ ವಸಂತ ರಾಜನೇ ಮಾಮರದ ನಡುವಿಂದ ಕೋಗಿಲೆಯ ಹಾಡಿಸು ಒಮ್ಮೆ...
Post a Comment