ಮುಗಿಲಿಗೂ ಕಡಲಿಗೂ ಎಲ್ಲೆ ಎಲ್ಲಿದೆ
ಎತ್ತ ನೋಡಿದರೂ ನೀಲಿ ನೀಲಿ
ಮನಸೂ ಒಂಥರ ಮುಗಿಲಂತೆ
ತನ್ನಿಷ್ಟದಂತೆ ಹರಿಯುವುದು ಕಡಲಂತೆ
ಪ್ರಕೃತಿಗೂ ಮನಸಿಗೂ ಹೇಳತೀರದ ಅನುಬಂಧ
ಇರಬೇಕು ಇಬ್ಬರ ನಡುವೆ ಸದಾ ಸವಿಬಂಧ
ನಿಸರ್ಗದ ನರ್ತನವ ಅರ್ಥೈಸಿಕೊಂಡರೆ
ಸಿಗುವುದು ಮನುಜನ ಮನಸಿಗೆ ಸಾಂತ್ವನ
ಪ್ರಕೃತಿಯ ಪ್ರೀತಿಗೆ ಪಾತ್ರರಾದರೆ ಈ ಜೀವನ ಸುಂದರ
ವಿಕೋಪಕ್ಕೆ ತುತ್ತಾದರೆ ಆಗುವುದು ಬದುಕು ಹರೋಹರ