Wednesday 24 April 2013

ಗೊಂಬೆಯಾಟವಯ್ಯ


ಮುದ್ದಾದ ಗೊಂಬೆಯ ನೋಡಿ ಮನಸೋತ ಮನವು 
ಅದನ್ನು ಪಡೆಯುವ ಹುಮ್ಮಸ್ಸಿನಲ್ಲಿ ಹೆಣೆಯಿತೊಂದು ಭಾವನೆಯ 
ಹೆಣೆದ ಭಾವಕ್ಕೆ ಬೆಸೆಯಿತೊಂದು ಸುಂದರ ಒಲವು 
ಮನದ  ಬಯಕೆಯ ಅರಿತ ಭಾವನೆಯು ಚೆಲ್ಲಿತೊಂದು ನಗುವು 
ಬೆರೆತು ಹೋದವು ಎರಡೂ ಒಲವಿನ ಬಂಧನದಲಿ 
ಆದರೆ ಆ ಮುದ್ದಾದ ಗೊಂಬೆಗೂ ಮನಸಿದೆ ಭಾವನೆಯಿದೆಯೆಂದು 
ಅರಿಯದೆ ಹೋಯಿತು ಆ  ಮನವು ಸಾಕಾಯಿತು ಅದಕೆ 
ಆ ಗೊಂಬೆಯ ಒಡನಾಟ ಅದಕ್ಕೆಂದು ನಡೆಸಿತು 
ಮತ್ತೊಂದು ಮನಸಿನ ಹುಡುಕಾಟ 
ಗೊಂಬೆಯ ಪ್ರೀತಿಸಿದ ಮನ ಮತ್ತೊಂದು ಮನದೊಂದಿಗೆ ಸಂತೋಷವಾಗಿದೆ 
ಆ ಮನವೇ ತನ್ನ ಪ್ರಾಣ ಎಂದು ನಂಬಿದ ಗೊಂಬೆ ಗೊಂಬೆಯಾಗೆ ಬಿದ್ದಿದೆ 

1 comment:

Badarinath Palavalli said...

ಪಳಗಿಸುವ ಆ ಮನಸ್ಸಿಗೆ ಗೊಂಬೆಯ ಒಳ ಸ್ತ್ವ ಮತ್ತು ಹೃದಯದ ಭಾವನೆಗಌ ಅರಿಯದೇ ಹೋದದ್ದು ಅಕ್ಷಮ್ಯ.