Saturday, 30 June 2012

ಆಳವಾದ ಪ್ರೀತಿ

ಕಡಲಿನ ಭಯಾನಕ ಅಲೆಗಳು 
ಉಕ್ಕಿ ಬಳಿ ಬಂದರೂ 

ಆಗಸದ ಮೋಡಗಳ ರೌದ್ರ ನರ್ತನದಿಂದ 
ಸಿಡಿಲು ನನ್ನ ತಲೆ ಮೇಲೆ ಬಡಿದರೂ 

ಬಿರುಗಾಳಿ ಬೀಸಿ ಎದಿರಾದರೂ
ಕಂಪನಗೊಂಡು ಭೂಮಿ ಬಿರಿದರೂ

ನಿನ್ನ ಒಲವ ಸವಿನೆನಪಲ್ಲಿ
ನಿನ್ನೊಲುಮೆಯ ಲತೆಯಲ್ಲಿ

ನಾನು ಹೂವಾಗಿ
ಪ್ರೀತಿಯ ತೇರನ್ನು ಹತ್ತಲು

ಪ್ರತಿ ಜನ್ಮ ಕಾಯುವೆ ಎಂದು ಹೇಳಿ
ಕಣ್ಣು ಮುಚ್ಚುವೆ.....
 

ಗೆಳೆಯನ ಹುಡುಕಾಟ

ಓ ನನ್ನ ಗೆಳೆಯನೇ ಎಲ್ಲಿರುವೆ ನೀನು 

ಇನ್ನು ಎಷ್ಟು ಕಾಯಲಿ ನಿನಗಾಗಿ ನಾನು 

ನೀ ನನ್ನ ಬಳಿ ಇದ್ದರೆ


ನನಗಿಲ್ಲ ಯಾವುದೇ ತೊಂದರೆ 

ಸಾಗರದಲೀ ನಾ ಮುಳುಗಿದರೂ 

ಪ್ರಳಯದಲೀ ನಾ ಸಿಲುಕಿದರೂ 

ನಾ ಬಯಸುವುದು ನಿನ್ನ ಸನಿಹ 

ಮಾತ್ರ ಗೆಳೆಯನೇ....

ಸ್ನೇಹ


ಸ್ನೇಹದ ಕಡಲು ಎಂಬುದು ಅಪಾರ 

ಅದರಲ್ಲಿ ಈಜಿ ಬಂದವನೇ ಸರದಾರ 

ಓ ನನ್ನ ಗೆಳೆಯ/ಗೆಳತಿಯರೇ ನಾವೆಲ್ಲರೂ 

ಜೊತೆಗೆ ಈ ಕಡಲಲ್ಲಿ ಈಜಿ 

ಇಳಿಸೋನ ನಮ್ಮ ಮನಸಿನ ಭಾರ 

ಅನುಬಂಧದ ಆನಂದ

ಕಲ್ಪನೆಯ ಕನಸಲ್ಲಿ 
ಜೀವನದ ಮನಸು ಬೆರೆತರೆ 
ಎಂತಹ ಆನಂದ 

ಪ್ರಕೃತಿಯ ಮಡಿಲಲ್ಲಿ
ಸಿಡಿಲಿನ ಅರ್ಭಟ ಅಡಗಿದರೆ
ಎಂತಹ ಆನಂದ

ಹಾಲಿನ ಹೊಳೆಯಲ್ಲಿ
ಜೇನಿನ ಮಳೆ ಸುರಿದರೆ
ಎಂತಹ ಆನಂದ

ಈ ಅರಿತು ಬೆರೆತು ಬಾಳುವ
ಸಂಬಂಧ ನಮ್ಮದಾದರೆ
ಆಹಾ ಎಂತಹ ಆನಂದ....!!!!!!!!!!


ಸ್ಪೂರ್ತಿ

ಅರಳುವ ಹೂವಲ್ಲಿ ನಾ ಕಂಡೆ 
ಒಂದು ನಗುವನ್ನು 
ಆ ನಗುವಿಗೆ ಸ್ಪೂರ್ತಿ ಆ ಗಿಡವು 

ಸುಂದರವಾದ ಹಸಿರು ಹೊಲದಲ್ಲಿ 
ನಾ ಕಂಡೆ ತುಂಬಿ ಬಂದ ಫಸಲು
ಆ ಫಲಕ್ಕೆ ಸ್ಪೂರ್ತಿ ಈ ಭೂಮಿ

ನೀಲಿ ಆಕಾಶದಲ್ಲಿ ನಾ ಕಂಡೆ
ಮಿರಿ ಮಿರಿ ಮಿನುಗುವ ಬೆಳ್ಳಿಮೋಡ
ಆ ಮೋಡಕ್ಕೆ ಸ್ಪೂರ್ತಿ ಆ ನೀಲಿ ಬಾನು

ಫಳ ಫಳ ಹೊಳೆಯುವ ಅಮ್ಮನ ಕಣ್ಣಲ್ಲಿ
ನಾ ಕಂಡೆ ಎಂದೂ ಕಾಣದ ಪ್ರೀತಿ
ಆ ಪ್ರೀತಿಗೆ ಸ್ಪೂರ್ತಿ ಆ ತಾಯಿಯ ಮಮಕಾರ

ಆ ದೇವರ ಸೃಷ್ಟಿಯಲ್ಲಿ ನಾ ಕಂಡೆ
ಈ ಎಲ್ಲ ಪ್ರಕೃತಿಯ ಕೊಡುಗೆ
ಆದರೆ ನನಗೆ ತಿಳಿಯಲಿಲ್ಲ ಯಾರೂ ಇದೆಕೆಲ್ಲ ಸ್ಪೂರ್ತಿ....????

ಪ್ರೀತಿಯೆಂಬ ಭ್ರಮೆ


ನಾ ಅಂದು ಕಂಡೆ ನಿನ್ನ
ಕಣ್ಣಲ್ಲಿ ಮನಸ್ಸಿನ ಪ್ರೀತಿ 
ನಾನಂದುಕೊಂಡೆ ಆ ಪ್ರೀತಿ 
ಸೇರುವುದು ನನ್ನ ಮನಸ್ಸಿನ ಪ್ರೀತಿ 
ಆದರೆ ಗೊತ್ತಾಯ್ತು ನನಗಿಂದು 
ನಾ ಅಂದು ಕಂಡ ಪ್ರೀತಿ 
ನಾನಂದುಕೊಂಡ ಹಾಗೆ ಇಲ್ಲವೆಂದು


ಕಾದಿರುವೆ ನಿನಗಾಗಿ

ಕಾದಿರುವೆ ನಿನಗಾಗಿ ಹಗಲಿರುಳು 
ಬಿಸಿಲೆನ್ನದೆ ಮಳೆಯನ್ನದೆ 
ಕಾಯುತಿರುವೆ 


ಪೂರ್ವದ ಸೂರ್ಯ ಮುಳುಗಿದರೂ 
ಪಶ್ಚಿಮದ ಚಂದ್ರ ಉದಯಿಸಿದರು 
ಅವುಗಳ ಅರಿವು ನನಗಿಲ್ಲ 


ಆಕಾಶದಲ್ಲಿ ತಾರೆಗಳು
ನನ್ನ ನೋಡಿ ನಕ್ಕರೂ
ನನಗಿಲ್ಲ ಯಾವುದೇ ಚಿಂತೆ



ಆದರೆ ಕಾಡುತಿದೆ 
ನನಗೊಂದು ಚಿಂತೆ
ನೀ ಬರುವೆಯ ನಾ ಚಿತೆ
ಏರುವ ಮೊದಲು ಎಂಬ ಚಿಂತೆ
 

ಓ ನನ್ನ ಉಸಿರೇ


ನೀ ನನ್ನ ಬಳಿ ಇದ್ದರೆ

ಬಾಗಿಲಿಗೆ ಬೆಸೆದ ಹೊಸ್ತಿಲು
ತೋರಣಕ್ಕೆ ಅಂದ ಕೊಡುವ ಹಸಿರು 
ಕಣ್ಣಿಗೆ ಕಾವಲಿರುವ ರೆಪ್ಪೆ 
ಒಡಲಿಗೆ ಜೀವ ತುಂಬುವ ಉಸಿರು 
ಕಡಲಿಗೆ ಹಿತ ನೀಡುವ ತೀರ
ಇದ್ದಂತೆ

ನೀ ನನ್ನ ಬಳಿ ಇಲ್ಲದಿದ್ದರೆ
ಕರಗುವ ಮಂಜಿನ ಹನಿ
ಬಿಸಿಲಲಿ ಬಾಡುವ ಸುಮ
ನೆರಳನೆ ಕಾಣದ ಲತೆ
ಜೇನಿನಿಂದ ದೂರಾದ ಹೂವು
ಸಿಡಿಲಿನ ಆರ್ಭಟಕ್ಕೆ ಬೆಚ್ಚುವ ಮರ
ಇದ್ದಂತೆ

ಅದಕ್ಕಾಗಿಯೇ ನಾನು
ನನ್ನ ಮನಸೆಂಬ ಕನ್ನಡಿಯಲ್ಲಿ
ನಿನ್ನ ಪ್ರತಿಬಿಂಬ ಶಾಶ್ವತವಾಗಿ
ನೆಲಸಲಿ ಎಂದು ಬಯಸುವೆ
ನೀ ನನ್ನ ಮರೆಯದಿರು
ಓ ನನ್ನ ಜೀವದ ಉಸಿರೇ
 

ಏಳು ಬೀಳುಗಳ ಜೀವನ

ಮನಸ್ಸಿನ ಕನ್ನಡಿಯ ಮುಂದೆ 
ಎಲ್ಲರೂ ಸುಂದರ 
ಗಾಜಿನ ಕನ್ನಡಿಯ ಮುಂದೆ 
ಕೆಲವರು ಸುಂದರ 

ದೇವರ ಸೃಷ್ಟಿಯಲ್ಲಿ
ಎಲ್ಲರೂ ಒಂದೇ
ಆದರೆ ಮನುಷ್ಯರ ಮಧ್ಯ
ಕೆಲವರು ಹಿಂದೆ ಮುಂದೆ

ಪ್ರೀತಿಯ ಅಪ್ಪ ಅಮ್ಮನಿಗೆ
ಎಲ್ಲ ಮಕ್ಕಳು ಒಂದೇ
ಆದರೆ ಕೆಲವು ಮಕ್ಕಳಿಗೆ
ದುಡ್ಡು ಮಾತ್ರ ಕಾಣುವುದು ಮುಂದೆ

ಈ ಒಂದೇ ಹಿಂದೆ ಮುಂದೆ
ಮೇಲು ಕೀಳು ಭಾವಗಳ
ಮಧ್ಯೆ ನಮ್ಮ ಬದುಕು ಯಶಸ್ವಿಯಾಗಿ
ಸಾಗುವುದೇ ಮುಂದೆ.....????????
 

ಚಂದ ಚಂದ

ಕಡಲ ನೀರಿಗೆ ಉಕ್ಕಿ 
ಹರಿಯುವ ಅಲೆ ಚಂದ 
ನನ್ನ ಮನದ ಕೊಳದಲ್ಲಿ 
ನಿನ್ನ ಮನ ಹರಿದರೆ ಚಂದ 

ದೇವರ ಪೂಜೆಗೆ ಸುಗಂಧ
ರಾಜ ಹೂವಿನ ಹಾರ ಚಂದ
ನನ್ನ ಕೊರಳಿಗೆ ನೀ ತಂದ
ಮುತ್ತಿನ ಹಾರ ಚಂದ

ಭೂಮಿ ಬೆಳಗಲು ಆ
ಸೂರ್ಯನಿದ್ದರೆ ಚಂದ
ನನ್ನ ಮನೆ ಬೆಳಗಲು
ನಿನ್ನ ಪ್ರೀತಿಯ ಬೆಳದಿಂಗಳು ಚಂದ

ಹಕ್ಕಿಯ ಹಾಡು ಕೇಳಲು ಚಂದ
ಹೂವು ಮುಡಿಯಲ್ಲಿದ್ದರೆ ಚಂದ
ನನ್ನ ಈ ಬಾಳಿಗೆ
ನಿನ್ನ ಒಲುಮೆಯೇ ಚಂದ

ನಿನ್ನ ಪ್ರೀತಿಯ ಮಿಡಿತ

ನಿನ್ನ  ಪ್ರೀತಿಯ ಕರೆಯೋಲೆಗೆ 
ನಾನಾಗುವೆ ಹರಿಯುವ ಪ್ರೇಮಗಂಗೆ 
ನಿನ್ನ ನವಿರಾದ ಸ್ನೇಹಕ್ಕೆ 
ನಾನಾಗುವೆ ಸವಿನೆನಪಿನ ಕಡಲು 

ನಿನ್ನ  ಅಂತರಾಳದ ನೋವಿಗೆ 
ನಾನಾಗುವೆ ಸಂತಸದ  ಚಿಲುಮೆ 
ನಿನ್ನ  ಹೊರಬರದ ಧ್ವನಿಗೆ  
ನಾನಾಗುವೆ ಪಿಸುಗುಡುವ ಸವಿಮಾತು 

ನಿನ್ನ ಮನಸಿನ ಕನಸಿಗೆ 
ನಾನಾಗುವೆ ಭಾವನೆಗಳ ನನಸು 
ನಿನ್ನ ಬಾಳಿನ ಪ್ರತಿ ಹೆಜ್ಜೆಗೂ 
ನಾನಾಗುವೆ ಕಾವಲಿನ ನೆರಳು 

ನಿನ್ನ ನೆನಪ ಕಾಡುತಿದೆ

ಈಗಲೇ ನೆನಪಿಸಿಕೋ ಎನ್ನ ,
ನಾ ಮರೆಮಾಚಿ ಮಾಯವಾಗುವ ಮುನ್ನ .....
ಆಮೇಲೆ ವ್ಯಥೆ ಪಡಬೇಡ ಚಿನ್ನ 
ನೀ ನೆನದರೆ ಎನ್ನ ನನ್ನ ಜೀವನ ಧನ್ಯ


ಮನಸು ಬಿಚ್ಚಿ ನಾ ಹೇಳುವೆ 
ನನ್ನ ಭಾವನೆಗಳು ನೂರು 
ಆ ಸವಿನೆನಪಲ್ಲಿ ನಾ ನಿನಗಾಗಿ 
ಕಟ್ಟುವೆ ಸ್ನೇಹವೆಂಬ ತೇರು 


ನಾನು ಮನಬಿಚ್ಚಿ ಹೇಳುತೀನಿ 
ನೀನು ಕಿವಿಗೊಟ್ಟು ಕೇಳುತೀಯ 
ನಾನೊಬ್ಬಳು ಭಾವಜೀವಿ ಜೊತೆಜೊತೆಗೆ 
ನಿನ್ನ ಸ್ನೇಹಕ್ಕಾಗಿ ಕಾದಿರುವ ಸ್ನೇಹಜೀವಿ 


ತೆರೆದ ಹೃದಯದಲ್ಲಿ ನಿನಗೆ ಹೇಳುವೆ 
ಈಗಲೇ ನೆನಪಿಸಿಕೋ ಎನ್ನ ,
ಕಡೆಯದಾಗಿ ನಾ ಕಣ್ಣು ಮುಚ್ಚಿ 
ಮಣ್ಣಲ್ಲಿ ಮಣ್ಣಾಗುವ ಮುನ್ನ 
ನೀ ನೆನದರೆ ಎನ್ನ ನನ್ನ ಜೀವನ ಧನ್ಯ

ಒಲವಿನ ಬಂಧನ

ನೀ ಆಡಿದ ಆ ಮಾತು ನನಗಾಯಿತು ಸ್ವಾತಿಮುತ್ತು 
ನೀ ನೋಡಿದ ಆ ನೋಟ 
ನನಗಿಂದು ಕೊಡುತಿದೆ ಕಾಟ 
ಓ ನನ್ನ ಪ್ರೀತಿಯೇ ನನಗೆ 
ಎಂದು ದಕ್ಕುವೆ ನೀನು...?????????

ನಿನ್ನ ಪ್ರೀತಿಯ ಮೋಡಿಗೆ 
ಸಿಕ್ಕಿಬಿದ್ದೆ ನಾನು 
ನಿನ್ನ ಮನಸ್ಸಿನ ಮೂಲೆಯಲ್ಲಿ 
ಇದ್ದು ಬಿಡಲೇ ನಾನು..??????

ಸಿಕ್ಕ ಪ್ರೀತಿಯನ್ನು ಬಿಟ್ಟು 
ಸಿಗದೇ ಇರುವದನ್ನು ಹುಡುಕಿ
ಕೊನೆಗೆ ಸಿಗುವುದನ್ನು ಕಳೆದುಕೊಂಡು 
ಕಳೆದುಹೋದ ಪ್ರೀತಿಯ ಬೆಲೆಯನ್ನು 
ಅಳೆಯುವುದು ನ್ಯಾಯವೇ.
ಓ ನನ್ನ ಪ್ರೀತಿಯೇ....?????