Tuesday, 31 December 2013

ನವವರ್ಷಕೆ ಸುಸ್ವಾಗತ

ಹೊಸವರ್ಷದ ಹೊಂಗಿರಣ ಬೀಳುವ ಸಮಯ 
ಇಂಪಾದ ನಾದದಂತೆ ಹರಿಯುವ ಗಾಯನವಾಗಲಿ ಈ ಜೀವನ 

ಕಂಡ ಕನಸುಗಳೆಲ್ಲ ನನಸಾಗದಿದ್ದರೆ ನಿರಾಸೆ ಬೇಡ 
ಬಯಸಿದ್ದೆಲ್ಲ ಸಿಕ್ಕಿತೆಂದು ಅಹಂಕಾರ ಬೇಡ 

ಕೊರಗುವ ಮನಸಿಗೆ ಸಂತೈಸುವ ಮನಸಾಗಿ 
ಹತಾಶೆ ತುಂಬಿದ ಮನಸಿಗೆ ಹುರಿದುಂಬಿಸುವ ಮನಸಾಗಿ 

ಸಾಗಿಸೋಣ ಈ ಬಾಳ ಬಂಡಿಯ ನವ ಉತ್ಸಾಹದಿಂದ 
ಹಾರೈಸುತ್ತ ಎಲ್ಲರಿಗೂ ನಿಷ್ಕಲ್ಮಷ ಮನಸಿಂದ 

1 comment:

Badarinath Palavalli said...

ಹೊಸ ವರುಷದ ಹೊಸಿಲಲಿ ಬ್ಲಾಗ್ ಪುಷ್ಕಳವಾಗಲಿ.

ಇಂತಹ ಸಾವಿರ ಕವನಗಳು ಮನದುಂಬಿ ಮುಂದೆಯೂ ಬರುತಿರಲಿ.