ನೋಡೋ ನೋಟಕ್ಕಿಂತ ಚಂದ
ನಿನ್ನ ನಿರ್ಮಲವಾದ ಹೃದಯದ ಬಡಿತ
ಅರಳಿದ ಹುಣ್ಣಿಮೆಗಿಂತ ಹೊಳಪು
ನಿನ್ನ ಮನಸಿನ ಬೆಳಕು
ನಾ ನುಡಿಯುವ ವೀಣೆಯಾದರೆ
ನನ್ನ ನುಡಿಸುವ ವೈಣಿಕ ನೀನಾಗಬೇಕು
ಆಗ ಹರಿಯುವುದು ನನ್ನ ಬಾಳಲ್ಲಿ
ಮಧುರ ಸುಮಧುರ ಸಂಗೀತ
ಒಲವೆಂಬ ಎಣ್ಣೆಯಲ್ಲಿ ನಿನ್ನ ನಗುವೆಂಬ
ಬತ್ತಿಯ ಮಾಡಿ ಪ್ರೀತಿಯ ದೀಪವ ಹಚ್ಚಿ
ಆ ಬೆಳಕಲ್ಲಿ ನನ್ನ ಬದುಕನ್ನು ನಂದಾದೀಪವಾಗಿ
ಬೆಳಗಿಸಿ ನಿನ್ನ ಸಂಗಾತಿಯಾಗಿ ಬಾಳಿಸು ನನ್ನ