ನಗುವ ಮಲ್ಲಿಗೆಯ ನೋಡಿ ನಾಚಿದ ಸೂರ್ಯ
ನನ್ನ ಶಾಖದಿಂದ ಬಾಡಿ ಹೋಗುವುದಲ್ಲ ಎಂದು ಮರುಗಿದ
ಗೂಡು ಕಟ್ಟಿ ಚಿಲಿಪಿಲಿ ಎಂದು ಗುನುಗುತಿದ್ದ ಹಕ್ಕಿಗಳ ಕಂಡ ಮರವು
ನಾ ನೆಲಕೆ ಕುಸಿದು ಬಿದ್ದರೆ ಈ ಜೀವಗಳ ಗತಿಯೇನೆಂದು ನೊಂದಿತು
ನೀರಲ್ಲೇ ಈಜಿ ಕುಣಿದು ಕುಪ್ಪಳಿಸಿ ಬದುಕುವ ಮೀನುಗಳ ಕಂಡು
ನಾನೇ ಬತ್ತಿದರೆ ಇವುಗಳ ಪಾಡೇನು ಎಂದು ಕೆರೆಯು ಕಣ್ಣೀರಿಟ್ಟಿತು
ಪ್ರಕೃತಿಯೇ ಪ್ರಕೃತಿಯ ಜೀವಿಗಳ ಬಗ್ಗೆ ಮರುಗುತ್ತಿರುವಾಗ
ಪ್ರಕೃತಿಯನ್ನು ವಿಕೃತಿಗೊಳಿಸುತ್ತಿರುವ ಮನುಜನೇಕೆ ಸುಮ್ಮನಿರುವನೋ...??

No comments:
Post a Comment