Thursday, 1 August 2013

ಕರುನಾಡ ಕೂಸು

ಮಲೆನಾಡ ಮುಡಿಗೆ ಮಲ್ಲಿಗೆ ಮುಡಿಸಿದಂತೆ 
ಬೆಳ್ಳಿಮೋಡ ಮುತ್ತಿಕ್ಕುತ್ತಿದೆ ಬೆಟ್ಟಕ್ಕೆ 

ಹಾಲಿನ ಸಾಗರದಂತೆ ತುಂಬಿ ಹರಿಯುತ್ತಿದ್ದಾಳೆ  
ಶರಾವತಿಯು ಜೋಗ ಜಲಪಾತದಲ್ಲಿ 

ಎಲ್ಲಿ ನೋಡಿದರಲ್ಲಿ ಹಕ್ಕಿಗಳ ಕಲರವ 
ಹೂಗಳ ಸುಗಂಧ ಬೃಂದಾವನದಲ್ಲಿ 

ಹೇಗೆ ಎಣಿಸಲಿ ಈ ಕರುನಾಡ ಸ್ಥಳಗಳ ಸೊಬಗನ್ನು 
ಆಹಾ ಏನು ಆನಂದವೋ ಈ ಕಂಗಳಿಗೆ 

ಚಂದಕ್ಕಿಂತ ಚಂದವಾದ ತಾಣಗಳೇ ತುಂಬಿವೆ  
ಹೇಗೆ ಬಣ್ಣಿಸುವುದೋ ಈ ನೆಲದ ಮಹಿಮೆಯ ನಾ ಕಾಣೆ

ಅದಕ್ಕೆಂದೇ ಎಂದೆಂದಿಗೂ ನಾವು ಹೆಮ್ಮೆಯಿಂದ ಹೇಳುವ 
ಕರುನಾಡ ಕೂಸುಗಳಾಗಿ ಹುಟ್ಟಿದ ನಾವೇ ಪುಣ್ಯವಂತರೆಂದು 


4 comments:

Badarinath Palavalli said...

ಭಾಗ್ಯವಂತರು ನಾವೇ ಭಾಗ್ಯವಂತರು.

prashasti said...

ಮಲೆನಾಡ ಸೊಬಗನ್ನ ಚೆನ್ನಾಗಿ ಚಿತ್ರಿಸಿದ್ದೀರ ಮೇಡಂ :-)

ಮೌನ ವೀಣೆ said...

yes..nice

ಮೌನ ವೀಣೆ said...

Yeah.. nice