ನೀ ಅರಿಯದ ಸತ್ಯವ ನಾ ಹೇಳಲೇ ಗೆಳೆಯ
ಮನಸಾರೆ ನಾ ನಿನ್ನ ಪ್ರೀತಿಸುತ್ತಿರುವೆ
ಪ್ರತೀ ಉಸಿರಲ್ಲೂ ನಿನ್ನ ಹೆಸರ ಜಪಿಸುತ್ತಿರುವೆ
ನನ್ನ ಮನವೆಂಬ ತಿಳಿನೀರಲ್ಲಿ ನಿನ್ನ
ಬಿಂಬವನ್ನಷ್ಟೇ ಕಾಣುತ್ತಿರುವೆ
ನಾ ಬರೆಯುವ ಪ್ರತೀ ಕವನದಲ್ಲೂ
ನಿನ್ನ ಕಲ್ಪನೆಯನ್ನೇ ಕೆತ್ತಿರುವೆ
ಇಷ್ಟಾದರೂ ನೀ ನನ್ನ ಮನ ಅರಿಯದೆ
ಗಾಳಿಗಿಂತ ವೇಗವಾಗಿ ದೂರ ಹೋಗುತಿರುವೆ
ದಿನ ಸುರಿಯುವ ಈ ಪ್ರೀತಿ ಮಳೆಯಲ್ಲಿ ನಿನ್ನ
ಜೊತೆ ನೆನೆಯುತ ಬದುಕಿನ ಪ್ರತಿಕ್ಷಣ ನಿನ್ನಲಿ
ಬೆರೆಯುತ ಕೊನೆವರೆಗೂ ನಿನ್ನ ಬಾಹುಗಳಲ್ಲೇ
ಬಂಧಿಯಾಗಿರುವ ಆಸೆ ನನಗೆ
ಇದನರಿತು ನೀ ಬೇಗನೇ ಓಡಿ ಬಾ ನನ್ನಲ್ಲಿಗೆ
No comments:
Post a Comment