ಸಾಗರ ಕರೆದರೆ ನದಿಯು ಹರಿದು ಬರದೆ ಇರವುದೇ
ಹೃದಯ ನೊಂದರೆ ಕಂಗಳ ಹನಿ ಜಾರದಿರುವುದೇ
ಹುಣ್ಣಿಮೆ ಚಂದಿರನ ತೋರಿದರೆ ಕಂದನ ಬಾಯಲ್ಲಿ
ತುತ್ತು ಇಳಿಯದಿರುವುದೇ
ಸುಡುವ ನೆಲವು ಮಳೆ ಸುರಿದರೆ ಧರೆಯು ತಣಿಯದಿರುವುದೇ
ಪ್ರಕೃತಿಯೇ ಆಗಲೀ ಮನುಜನೇ ಆಗಲೀ
ನೋವಾದರೂ ನಲಿವಾದರೂ ಒಬ್ಬರಿಗೊಬ್ಬರೂ ಇದ್ದೆ ಇರುತಾರೆ
ನೊಂದ ಮನಸಿಗೊಂದು ಬೇಕು ಸಾಂತ್ವನ ನೀಡುವ ಮನಸು
ಖುಷಿಯ ಭಾವಕ್ಕೊಂದು ಬೇಕು ಪ್ರತಿಸ್ಪಂದಿಸುವ ಮನಸು
No comments:
Post a Comment