ಏನನ್ನೋ ಯೋಚಿಸುತ್ತ ಕುಳಿತಿದ್ದೆ
ಮನೆಯ ಮಹಡಿಯ ಮೇಲೆ ನಾ ಅಂದು
ಹಾಗೆ ಸುಮ್ಮನೆ ಆನಂದಿಸುತ್ತಿದ್ದೆ ಆ ನಿಸರ್ಗವ
ನೀನೇಕೆ ಕಣ್ಮುಂದೆ ಬಂದೆಯೋ ಏನೋ
ನಾ ಅರಿಯೆ ಸುಂದರ ಕುಂಡದಲ್ಲಿ ಅರಳಿ
ನಗುತ್ತ ನಿಂತಿದ್ದೆ ನನ್ನ ನೋಡುತಿದ್ದೆ ನೀನು
ನಿನ್ನ ನಗುವ ನೋಡುತ್ತಾ ನನ್ನ ಮನದ ಚಿಂತೆಯ
ಮರೆತು ಮಂದಹಾಸವ ಬೀರಿದೆ ನಾನು
ಆ ಕ್ಷಣವೇ ನಿನಗೆ ಅರ್ಪಿಸಿದೆ ನನ್ನ ಮೊದಲ ಕವನವ
ಕೇಳಿ ಆನಂದಿಸು ಓ ಹೂವೆ
"ನೀ ಅಂದು ಚೆಲ್ಲಿದ ಆ ಹೂನಗೆ ಇಂದೂ ನನ್ನ ಕಾಡುತಿದೆ
ಸಾಕು ಆ ನಿನ್ನ ಹೂನಗೆ ನನ್ನ ಈ ಜೀವನದ ಪಾಲಿಗೆ"
ನೀನಿಂದು ಮೆಚ್ಚಿದರೆ ಈ ಕವನ
ನಾ ಮನಸಾರೆ ಅರ್ಪಿಸುವೆ ನಿನಗೆ ಕೋಟಿ ನಮನ
No comments:
Post a Comment