ನವಿರಾದ ಕನಸೊಂದು ಬಿತ್ತು ಮುಂಜಾವಿನಲ್ಲಿ
ಪೋಣಿಸಿದ ಸುಂದರ ಮುತ್ತುಗಳಂತೆ ಬಿದ್ದಿದ್ದವು
ಇಬ್ಬನಿಯ ತುಂತುರು ಹನಿಗಳು ಹಸಿರೆಲೆಗಳ ಮೇಲೆ
ನಸುಕಾದ ಬೆಳಕು ಬೀರುತ್ತಿತ್ತು ಆಗಸದಲ್ಲಿ
ಸೂರ್ಯನ ಚಿನ್ನದ ಬಣ್ಣವು ಹರಡಿತ್ತು ಮೋಡಗಳ ಮೇಲೆ
ಎಂತಹ ರಮಣೀಯ ನೋಟವದು ಆಹಾ ಕಂಗಳೆರಡು
ಸಾಲದಾಯ್ತು ಎನಗೆ ಅದನ್ನು ನೋಡಲು
ನನ್ನನ್ನೇ ನಾ ಮರೆತು ನಿಂತಿದ್ದೆ ಆ ಒಂದು ಕ್ಷಣ
ಎಲ್ಲೆಲ್ಲಿ ನೋಡಿದರೂ ಮನಸು ಸೆಳೆಯುತ್ತಿದೆ ಹಸಿರು ವನ
ಏನು ಪುಣ್ಯ ಮಾಡಿದವೋ ಈ ಕಂಗಳು ಎಂದು
ಖುಷಿಯಿಂದ ಕಣ್ಣು ಬಿಟ್ಟು ನೋಡಿದರೆ ಅದೇ
ನಾಲ್ಕು ಗೋಡೆಗಳ ಮಧ್ಯ ಮಲಗಿದ್ದೆ
ಮೂಡಿತು ಈ ಮನಸಿಗೆ ನಿರಾಸೆಯೊಂದು
ಮುಂಜಾವಿನ ಆ ಸೌಂದರ್ಯ ಈ ಕಣ್ಣು ತುಂಬುವುದೆಂದು
No comments:
Post a Comment