ಚಂದ್ರಶೇಖರ ಕಂಬಾರರ "ಚಕೋರಿ" ಒಂದು ವಿಶಿಷ್ಟ ಕೃತಿ ಏಕೆಂದರೆ ಇಲ್ಲಿ ಮಾಮೂಲಿನಂತೆ ಕಥೆಯಷ್ಟೇ ಇಲ್ಲ.. ಎಲ್ಲ ಪಾತ್ರಗಳ ಚಿತ್ರಣ ಕಾವ್ಯದಿಂದಲೇ ಪರಿಚಿತವಾಗುತ್ತವೆ. ಅದಕ್ಕೆ ಏನೋ ಈ ಪುಸ್ತಕದ ಮೇಲೆ ಕಾದಂಬರಿ ಬದಲು ಮಹಾಕಾವ್ಯವೆಂದು ಮುದ್ರಿಸಿದ್ದಾರೆ. ಈ ಕೃತಿ ಓದಿದಮೇಲೆ ಒಂದು ಹೊಸ ಅನುಭವ ನೀಡುವುದಂತೂ ದಿಟ. ಈ ಹಿಂದೆ "ಶಿಖರಸೂರ್ಯ" (ಚಕೋರಿಯ ಮುಂದಿನ ಭಾಗವನ್ನೇ ನಾ ಮೊದಲು ಓದಿದ್ದೆ http://shwetha-hoolimath.blogspot.in/2017/01/blog-post_1.html ). ಆದರೆ ಎಲ್ಲಿಯೂ ಚಕೋರಿಯನ್ನು ಓದಿ ಇದನ್ನು ಓದಬೇಕೆಂದು ನನಗೆ ಅನಿಸಲಿಲ್ಲ, ಹೊಸ ಕೃತಿಯೆಂದೇ ಓದಿದ್ದೆ. )
ಇದು ಕಾವ್ಯವಾಗಿರುವುದರಿಂದ ಕಥೆಯ ಬಗ್ಗೆ ಹೇಳುವುದು ನನಗೆ ಕಷ್ಟವೆನಿಸುತ್ತಿದೆ. ಕಥಾನಾಯಕ ಚಂದಮುತ್ತ ಒಬ್ಬ ನಾದಪ್ರಿಯ. ಅವನನ್ನು ಕಾಡಿದ ಯಕ್ಷಿಯ ಮೋಹಕ್ಕೆ ತನ್ನವರನ್ನೇ ಬಿಡುವ ಪ್ರಸಂಗ, ಅವನು ಪಟ್ಟ ಪಾಡು, ಮತ್ತು ಇವರಿಬ್ಬರ ಪ್ರೇಮಕ್ಕೆ ವೈರಿಯಾಗುವ ಎರಡು ಪಾತ್ರಗಳ ಚಿತ್ರಣ ನಿಜಕ್ಕೂ ರೋಚಕವಾಗಿವೆ. ಆರಂಭದಲ್ಲಿ ಚಂದಮುತ್ತನ ಮೇಲೆ ಮೂಡಿದ ಭಾವನೆಗಳು ಅಂತ್ಯದಲ್ಲಿ ಬದಲಾಗುತ್ತವೆ. ಅದಕ್ಕೆ ಏನೋ ಮುನ್ನುಡಿಯಲ್ಲಿ "ಚಂದಮುತ್ತನ ತನ್ಮಯತೆ ಇಂದಿನ ಜಾಣ ಬುದ್ಧಿಗೆ ಭಕ್ತಿಯಾಗಿ ಕಾಣಿಸಬಹುದು. ಆದರೆ ಚಂದಮುತ್ತನ ಭಕ್ತಿ ಟೊಳ್ಳುಭಾಕ್ತಿಯಲ್ಲ ಎಂಬುದನ್ನು ಮಾತ್ರ ಸೂಚಿಸಭಯಸುತ್ತೇನೆ." ಎಂದು ಹೇಳಿದ್ದಾರೆ. ಇದರ ಅರ್ಥ ಕೃತಿ ಓದಿದಮೇಲೆ ತಿಳಿಯುತ್ತದೆ.
ಚಕೋರಿಯ ಬಗ್ಗೆ ಬಹಳ ವಿವರಗಳನ್ನು ಹೇಳುವುದು ಕಷ್ಟ, ಏಕೆಂದರೆ ಇಲ್ಲಿನ ನಿರೂಪಣಾ ಶೈಲಿಯ ವಿಭಿನ್ನತೆ. ಇದರ ಮುಂದುವರೆದ ಭಾಗ "ಶಿಖರಸೂರ್ಯ" ಕೂಡ ಕಥಾನಾಯಕ ಚಂದಮುತ್ತ ಜಯಸೂರ್ಯನಾಗಿ ನಂತರ ಶಿಖರ ಸೂರ್ಯನಾಗಿ ಮೆರೆದ ರೋಚಕ ಕಥೆ ಇದು. ಚಕೋರಿ ಮತ್ತು ಶಿಖರಸೂರ್ಯ ಎರಡೂ ಮಹಾಕಾವ್ಯಗಳಾಗಿದ್ದು ಮಾಮೂಲಿನಂತೆ ಬೇಗ ಗ್ರಹಿಸಿ ಮುಗಿಸುವಂತಹ ಕೃತಿಗಳಲ್ಲವೆಂಬುದು ನನ್ನ ಅನುಭವ.
No comments:
Post a Comment