Friday, 29 July 2016

ಊಟಕ್ಕಾಗಿ ಹಸಿದ ಹೊಟ್ಟೆಯನ್ನು ತುಂಬಿಸುವುದಕ್ಕಿಂತ ಕಷ್ಟ 
ಪ್ರೀತಿಗಾಗಿ ಹಸಿದ ಹೊಟ್ಟೆಯನ್ನು ತುಂಬಿಸುವುದು 

Thursday, 28 July 2016

ದುಃಖ ಎನ್ನುವುದು ಸಾಗರದಂತೆ 
ಇಳಿಹೊತ್ತಿನಲ್ಲಿ ಬರುವ ಅಲೆಯಂತೆ ಹರಿಯುವುದು 
ಕೆಲವೊಮ್ಮೆ ಸಮುದ್ರದ ಅಲೆ ಶಾಂತವಾಗಿದ್ದರೆ 
ಮತ್ತೊಮ್ಮೆ ನಾಶ ಮಾಡುವಂತೆ ಏಳುವುದು 
ಅದಕ್ಕೆ ಜೀವನದ ಸಮುದ್ರದಲ್ಲಿ ಮುಳುಗುವ ಭಯವ ಬಿಟ್ಟು 
ಈಜುವ ಕಲೆಯ ಕಲಿತು ಬದುಕಿನ ಬುನಾದಿಯ ಕಟ್ಟು 

Tuesday, 19 July 2016

ನಿನ್ನ ಮನಸಿಗೆ ಬಂದ ಕನಸನ್ನು ವ್ಯರ್ಥ ಮಾಡಬೇಡ 
ಆ ಕನಸನು ನನಸು ಮಾಡುವ ಪ್ರಯತ್ನ ಬಿಡಬೇಡ 
ಕಾರಣ ಇಂದು ಕನಸು ಎಂಬ ಬೀಜ ಬಿತ್ತಿದರೆ 
ಭರವಸೆಯ ನಾಳೆಗಳೆಂಬ ಫಲ ಬೆಳೆಯುವುದು 

Friday, 15 July 2016

ಪುಸ್ತಕ

ಕುಳಿತಲ್ಲೇ ಜಗತ್ತನ್ನೇ ಸುತ್ತಿಸುವ  ವಾಹನ 
ನವರಸಗಳನ್ನು ಅನುಭವಿಸುವ ಸಾಧನ 
ಓದುತ್ತಾ ಹೋದಂತೆ ಆಗುವುದು ರೋಮಾಂಚನ 
ಅದಕೆ ಕಾರಣ ಕವಿಯ ಅಭೂತಪೂರ್ವ ಕಲ್ಪನ 

ವೀಣೆಯ ಮೀಟುವವರೆಗೂ ವೀಣೆಯೆನಿಸದು 
ಹಾಡನ್ನು ಹಾಡುವವರೆಗೂ ಹಾಡೆನಿಸದು 
ಹಾಗೆ ಹೃದಯದಲ್ಲಿ ಅಡಗಿದ ಪ್ರೀತಿಯ 
ಕೊಡುವವರೆಗೂ ಪ್ರೀತಿ ಎನಿಸದು 

Wednesday, 13 July 2016

ಮಳೆಯಿಲ್ಲದೆ ಕಳೆಗುಂದಿದ ಮರದಂತೆ 
ಪಂಜರದೊಳಗೆ ಸಿಕ್ಕಿಬಿದ್ದ ಹಕ್ಕಿಯಂತೆ 
ಸಣ್ಣ ಬಟ್ಟಲಲ್ಲಿ ವೃತ್ತಗಳನ್ನು ಎಳೆಯುವ ಮೀನಿನಂತೆ 
ಕ್ರೋಧದಿಂದ ಜಿಗುಪ್ಸೆಗೊಂಡ ಹುಲಿಯಂತೆ 
ಬಿಸಿಲಿನ ತಾಪಕ್ಕೆ ಬಾಡುವ ಸುಮದಂತೆ 
ಬರಗಾಲದಿಂದ ಒಣಗಿದ ಸರೋವರದಂತೆ 
ನಾ ನಿನ್ನಿಂದ ದೂರಾದ ಕ್ಷಣ 
ಪರಿತಪಿಸುವುದು ನನ್ನ ಮನ 

Monday, 11 July 2016

ಮೌನ ಸಮುದ್ರವಿದ್ದಂತೆ ಮಾತು ನದಿಯಂತೆ 
ಮೌನಕ್ಕಿಂತಲೂ ಸುಂದರವಾದ ಮಾತಿದ್ದರೆ ಮಾತಾಡು 
ಕಾರಣ ನದಿ ಎಷ್ಟೇ ಉದ್ದ ಹರಿದರೂ 
ಕೊನೆಗೆ ಸೇರುವುದು ಸಾಗರವನ್ನೇ 
ಹಾಗೆ ಮಾತು ಎಷ್ಟೇ ಉದ್ದ ಬೆಳೆದರೂ 
ಕೊನೆಗೆ ಶರಣಾಗುವುದು ಮೌನಕ್ಕೆ 

Monday, 4 July 2016

ನಿನ್ನ ಜೀವನ ಒಂದು ಪುಸ್ತಕದಂತೆ 
ಒಂದೇ ಬಾರಿ ಕೊನೆಯ ಪುಟಕೆ ಹಾರಲು ಯತ್ನಿಸಬೇಡ 
ಅದಕೆ ಜೀವನದ ಪ್ರತೀಕ್ಷಣವನ್ನು ಆನಂದಿಸು 
ಪ್ರತೀ ಪುಟವನ್ನು ಸುಂದರ ಸವಿನೆನಪಿಂದ ತುಂಬಿಸು 
ಆನಂದದಲ್ಲಿ ಅರಳಿದ ಕವಿತೆ ಮಾಡುವುದು 
ಸುಂದರ ಸ್ವಪ್ನಗಳ ಕುಡಿಕೆ 
ನೋವಲ್ಲಿ ಗೀಚಿದ ಕವಿತೆ ಆಗುವುದು
ಪರರಿಗೆ ಸಾಂತ್ವನದ ಹೊದಿಕೆ