ಪ್ರೀತಿ ಬೆಳಗ್ಗೆ ಹುಟ್ಟಿ ಸಂಜೆ ಸಾಯುವ ವಸ್ತುವಲ್ಲ ಅವಶ್ಯಕತೆ ಇಲ್ಲದಾಗ ಶುರುವಾಗಿ ತುಂಬಾ ಪರಿತಪಿಸುವಾಗ ದೂರಾವಗೋ ಮಾಯಾವಿ
Monday, 22 February 2016
ನಾನು ನೀನು ಒಟ್ಟಿಗೆ ತೆಗೆಸಿದ ಭಾವಚಿತ್ರಗಳನ್ನೆಲ್ಲ ಒಂದುಗೂಡಿಸಿದಾಗ ನನ್ನ ಅಂದಕ್ಕಿಂತ ನಿನ್ನ ಕಣ್ಣಲ್ಲಿ ಹೊಳೆವ ಒಲವೇ ಹೆಚ್ಚು ಮಿಂಚುವುದು ಅದಕ್ಕೆಂದೇ ನನಗೂ ಹೊಟ್ಟೆಕಿಚ್ಚಾಗುವುದು
Friday, 19 February 2016
ಕಲ್ಪನೆಯ ಚಿತ್ರಕ್ಕೂ ಬಿಡಿಸಿದ ಚಿತ್ರಕ್ಕೂ ಆದ ವ್ಯತ್ಯಾಸವನ್ನೇ ತಡೆಯಾಲಾಗದ ಮನಸು ಜೀವನದಲ್ಲಿ ಕಂಡ ಕನಸಿಗೂ ವಾಸ್ತವದ ಸ್ಥಿತಿಯಲ್ಲಿ ಆಗುವ ಬದಲಾವಣೆಗಳ ಸಹಿಸುವುದೇ ಜೀವನದ ಚಿತ್ರವ ಸುಂದರವಾಗಿ ಕೆತ್ತುವ ಬದಲು ಇರುವ ವಾಸ್ತವವನ್ನು ಸ್ವಚ್ಛ ಮನದಿಂದ ಒಪ್ಪಿಕೊಂಡರೆ ಬದುಕೆಂಬ ಚಿತ್ರಪಟವು ಆಕಾಶದೆತ್ತರಲ್ಲಿ ಹಾರಾಡುವುದು
Wednesday, 17 February 2016
ನಿನ್ನ ಕಡಲಂತ ಕಂಗಳಲಿ ನನ್ನ ರೂಪವೊಂದೇ ಕಾಣಲಿ ಎಂದು ಬಯಸುವ ಸ್ವಾರ್ಥಿ ನಾನಲ್ಲ ಮುಗಿಲಂತ ಮನದಿಂದ ನನಗೆ ಮಾತ್ರ ಪ್ರೀತಿ ಸುರಿಸು ಎಂದು ಹೇಳುವ ದುರಾಸೆಯೂ ಎನಗಿಲ್ಲ ಈ ಮನಸು ಬಯಸುವುದೊಂದೇ ನೀ ಕಡಲಲ್ಲೇ ಮುಳುಗಿರು ಮುಗಿಲಲ್ಲೇ ಅವಿತಿರು ನನ್ನ ನಿಷ್ಕಲ್ಮಷ ಪ್ರೇಮ ನಿನ್ನ ಮನಸಿಗೆ ಮುಟ್ಟಿದರೆ ಸಾಕು ಉಸಿರಿರುವವರೆಗೂ ನಿನಗಾಗಿ ಕಾಯುವ ಸುಖವೊಂದೇ ಬೇಕು ಬೇರೇನೂ ಬಯಸದು ಈ ಮನಸು ನಿನ್ನ ಪ್ರೇಮದ ಹೊರತು
Monday, 15 February 2016
ಜೀವನವೊಂದು ಜೇಡರ ಬಲೆಯಂತೆ ವೃತ್ತಾಕಾರದಲ್ಲಿದೆ ಅಲ್ಲಿ ತುಂಬಿರುವುದು ಸುಖ ದುಃಖ ನೋವು ನಲಿವುಗಳು ಒಂದೊಂದೇ ಎಳೆಯನ್ನು ಪ್ರೀತಿ ವಿಶ್ವಾಸಗಳಿಂದ ಹೆಣೆದು ಕಟ್ಟಿದರೆ ಸುಖವು ಕಟ್ಟಿಟ್ಟ ಬುಟ್ಟಿ ಆಗ ನೀ ಹೆಣೆದ ಬಲೆಯಲ್ಲಿ ನೀನೆ ಬಿದ್ದರೂ ಕೇಡಿಲ್ಲ ಪರರು ಬಿದ್ದರೂ ಕೇಡಿಲ್ಲ ಪರರ ಅಳಿಸಲು ನೀ ಹೆಣೆದರೆ ನಿನ್ನ ಉಳಿಸಲು ಮತ್ಯಾರು ಬರಲ್ಲ ಇದೇ ಜೇಡರ ಬಲೆಯಂತಿರುವ ಜೀವನದ ಕಹಿ ಸತ್ಯ
ಎಲ್ಲರೂ ನನ್ನವರೇ ಎಂದು ನಂಬಿ ಮೋಸ ಹೋದ ಮನಸೊಂದು ಸಾಯಲು ಹೊರಟಿತಂತೆ ಆದರೆ ದೇಹವ ಏನು ಮಾಡುವುದು ಜೀವ ತೆಗೆಯುವ ಶಕ್ತಿ ಜೀವ ಕೊಟ್ಟ ದೇವರಿಗೇ ಎಂದು ಅರಿತು ಹಿಂದೆ ತಿರುಗಿದರೆ ಮತ್ತೂ ಮೋಸ ಮಾಡಿದವರನ್ನೇ ನೋಡುತಿರಬೇಕು ಏನು ಮಾಡಲೂ ಆ ನೊಂದ ಮನಸಿಗೆ ತೋಚದಾಯಿತು ಕೊನೆಗೊಂದು ತಿಳಿಯಿತು ಸತ್ಯ ನನ್ನವರೆಲ್ಲರೂ ಮಿಥ್ಯ ಇಲ್ಯಾರು ನಿನಗಿಲ್ಲ ನಿನಗೆ ನೀನೆ ಎಲ್ಲ ಬಿಟ್ಟು ಬಿಡು ಎಲ್ಲರೂ ನನ್ನವರೆಂಬ ಭ್ರಮೆಯ ಮಾಡಿಬಿಡು ನಿರ್ಲಕ್ಷ ಆಗ ಓಡಿ ಬರುವುದು ಛಲವು ನಿನ್ನದಾಗಿಸಲು ಬದುಕಿನ ಗೆಲುವು
Sunday, 7 February 2016
ಬಾಳೊಂದು ಸುಂದರ ಗಣಿತ ಪ್ರೀತಿ ವಿಶ್ವಾಸಗಳ ಸಂಕಲನ ದ್ವೇಷ ಹೊಟ್ಟೆಕಿಚ್ಚುಗಳ ವ್ಯವಕಲನ ಸ್ನೇಹ ಪ್ರೀತಿಗಳನು ಗುಣಿಸಿ ಕೋಪ ಕ್ರೌರ್ಯಗಳಿಂದ ಭಾಗಿಸಿದರೆ ಉಳಿಯುವ ಶೇಶವೇ ಬದುಕಿನ ತಕಧಿಮಿತ
Friday, 5 February 2016
ಪದಗಳಲ್ಲೇ ಎಷ್ಟೆಂದು ಬಿಂಬಿಸಲಿ ಈ ಭಾವನೆಗಳನು ಖಾಲಿಯಾದವೇನೋ ಎಂಬ ದುಗುಡ ನನ್ನ ಮನದಲ್ಲಿ ಶಬ್ದಗಳನ್ನೇ ಹುಚ್ಚಿಯಂತೆ ಹುಡುಕುತಿರುವೆ ಭಂಡಾರದಲ್ಲಿ ನವ ಪದಗಳ ಸೃಷ್ಟಿಸಲು ಕೊಟ್ಟಿಲ್ಲ ಶಕ್ತಿ ಎನಗೆ ಶಾರದೆಯು ಹುಡುಕಾಟದಲ್ಲೇ ಸೋತು ಸುಣ್ಣವಾದೇ ನಾ ಇಂದು ಚಿತ್ರವಾದರೂ ಬರೆಯೋಣ ಎಂದೆನಿಸುತ್ತಿದೆ ಈ ಮನಕೆ ಪದಗಳಲಿ ಪೋಣಿಸುವ ಕಲೆಯು ಬಣ್ಣಗಳ ಲೋಕದಲ್ಲೂ ಕೈಹಿಡಿವುದೇ ಎಂಬ ಅನುಮಾನ ಒಂದು ಕಡೆ ಹೊಸದೇನಾದರೂ ಕಲಿಯುವ ಆಸೆ ಮತ್ತೊಂದು ಕಡೆ ಯಾರಿಗೆ ಗೊತ್ತು ತಾಯಿ ನಿನ್ನ ಲೀಲೆ ಈ ಮಗಳಿಂದು ಬೇಡುತಿಹಳು ನಿನ್ನ ಕೃಪೆಯ ಹರಸಮ್ಮ ನನ್ನ ಸಿಗಲೆಂದು ಚಿತ್ರಬಿಡಿಸುವ ಕಲೆಯ
Monday, 1 February 2016
ನನ್ನೊಡಲಲ್ಲಿ ಉರಿಯುತಿರುವ ನಿರಾಸೆಯ ಬೆಂಕಿ ಆರಲು ಕುಡಿಯಬೇಕಾಗಿದೆ ಯಶಸ್ಸಿನ ನೀರನು ಆ ನೀರಿಗಾಗಿ ಸೇರಿಸಬೇಕು ನಾ ಪರಿಶ್ರಮವೆಂಬ ಹನಿಗಳನ್ನು ಕಷ್ಟಪಟ್ಟರೆ ತಾನೇ ಸುಖದ ಬಾಗಿಲು ತೆರೆಯುವುದು ಮುಚ್ಚಿರುವ ಕದವ ತೆರೆಯಲು ಸುರಿಸಬೇಕು ಬೆವರಿನ ಶ್ರಮವ ಅರಿಯಲು ಹನಿ ಹನಿ ಸೇರಿದರೆ ಹಳ್ಳ ಎನ್ನುವ ಹಿರಿಯರ ನುಡಿಯ ಪ್ರಯತ್ನವೆಂಬ ಬತ್ತಿಗೆ ಶ್ರಮವೆಂಬ ಎಣ್ಣೆಯ ಕೂಡಿಸಿ ದೀಪ ಹಚ್ಚುವಾಸೆ ಬೆಳಗಲು ಯಶಸ್ಸೆಂಬ ಜ್ಯೋತಿಯ ಇಲ್ಲದೇ ಯಾವುದೇ ದುರಾಸೆ