ಬಾಳೊಂದು ಲತೆಯಾದರೆ ನೋವು ನಲಿವುಗಳೆಲ್ಲ ಹೂವು ಮುಳ್ಳುಗಳಂತೆ ಸುಂದರವಾದ ಹೂವು ಕಣ್ಣಿಗೆ ತಂಪಾಗಿ ಕಂಡರೆ ಹರಿತವಾದ ಮುಳ್ಳು ಚುಚ್ಚಿದರೆ ಕಣ್ಣೀರು ಹರಿವುದು
Friday, 20 February 2015
ವೀಣೆಯಿಂದ ನಾದಗಂಗೆ ಹರಿದಂತೆ ನವಿಲು ನಾಟ್ಯ ಮಯೂರಿಯಾಗಿ ಕುಣಿದಂತೆ ಪ್ರೇಮ ಪಲ್ಲವಿ ಬರೆಯುವಾಗ ಒಲವಿನ ಶ್ರುತಿ ಸೇರಿದಂತೆ ನೀ ಬಳಿ ಬಂದ ಕ್ಷಣ ಮಿಂಚಂತೆ ಕುಣಿವುದು ನನ್ನ ಮನ
Tuesday, 17 February 2015
ಕವನ ಬರೆಯಲು ಇಂದೇಕೋ ಮನಸಿಲ್ಲ ಬರೆಯದೇ ಇರಲು ಮನಸು ಕೇಳುತ್ತಿಲ್ಲ ಏನು ಬರೆಯುವುದೆಂದು ತೋಚುತ್ತಿಲ್ಲ ಆದರೂ ಬರೆಯುವ ಹಠ ಹೋಗುತ್ತಿಲ್ಲ
Monday, 16 February 2015
ಅರಿಯದ ಸತ್ಯದ ಹುಡುಕಾಟ ಮರೆಯದ ನೆನಪಿನ ಪರದಾಟ ಎರಡರ ನಡುವೆ ಜೀವನವೆಂಬ ನೌಕೆಯ ಎಳದಾಟ
Thursday, 12 February 2015
ನನ್ನ ಬಾಳೆಂಬ ಬತ್ತಿಗೆ ನಿನ್ನ ಒಲವೆಂಬ ಎಣ್ಣೆಯ ಹಾಕಿ ಪ್ರೀತಿಯ ನಂದಾದೀಪವ ಹಚ್ಚುವಾಸೆ ನನಗೆ ಈ ನನ್ನ ಬಾಳಿಗೆ ನಿನ್ನಾಸರೆಯೇ ನನಗೆಲ್ಲ ನೀನಿಲ್ಲದೇ ನನಗೆ ಬದುಕಿಲ್ಲ
ನಾ ಕವಿಯಾಗಲು ಹೊರಟಿರುವೆ ಕಾಣದ ಕವಿತೆಯ ಹುಡುಕುತ್ತಾ ಕಡಲೋ ದಡವೋ ಕಾಡೋ ನಾಡೋ ಅದರ ಅರಿವಿಲ್ಲ ಎನಗೆ ಪದಗಳ ಅರಸುತ್ತ ಸುಂದರ ಸಾಲನ್ನು ಹೆಣೆಯುತ್ತಾ ಕವನದ ಮಾಲೆಯ ಮಾಡುವ ಆಸೆಯೊಂದೇ ಮನದಲ್ಲಿ ನನಗೆ
Wednesday, 11 February 2015
ಮಾತು ಕಲಿಸುವ ಅಮ್ಮ ಕನ್ನಡವಮ್ಮ ಅನ್ನ ನೀಡುವ ಅಮ್ಮ ಭೂಮಿಯಮ್ಮ ನೀರು ಕೊಡುವ ಅಮ್ಮ ಕಾವೇರಮ್ಮ ಇಂತ ಅಮ್ಮಂದಿರ ಕೊಟ್ಟ ಕರುನಾಡಲಿ ಬದುಕುವ ನಾವೇ ಪುಣ್ಯವಂತರಮ್ಮ
Tuesday, 10 February 2015
ನಾ ಅರಳಿದ ತಾವರೆ ನೀ ನನ್ನ ನಗಿಸುವ ಚಂದಿರ ನಾ ಉಸಿರಾಡುವ ದೇಹ ನೀ ಅಲ್ಲಿ ಬೆರೆತಿರುವ ಆತ್ಮ ಹಸಿರೆಲೆಯ ಮೇಲಿರುವ ಇಬ್ಬನಿಯ ಹನಿಯಂತೆ ನನ್ನ ಪ್ರೀತಿ ಹೂಗಳ ಪರಿಮಳದಂತೆ ನೀ ನನ್ನ ಆವರಿಸಿರುವ ರೀತಿ
Tuesday, 3 February 2015
ಮನ ಏನನ್ನೋ ಬಯಸುತಿದೆ ವಿಧಿಯಲ್ಲಿ ಮತ್ತೇನೋ ಬರೆದಿದೆ ಮನಸಿನ ಆಸೆಯೇನೋ ಬದಲಾಗುವುದು ಆದರೆ ವಿಧಿಯ ಬರಹ ಬದಲಾದಿತೆ..?? ಹಣೆಬರಹ ಬದಲಿಸುವ ಶಕ್ತಿಯಿಲ್ಲದ ಮನಕೆ ಕನಸು ಕಾಣುವ ಹಕ್ಕಿದೆಯಾ..???