Wednesday, 3 December 2014

ನೀಲಿ ಕಡಲಾಚೆ ನೀಲಿ ಆಗಸವೇ ಕಂಡರೂ 
ಮುಟ್ಟಲಾಗುವುದೇ ನೀಲಿ ಬಣ್ಣವ 
ಸಾಲು ಮರಗಳೆಲ್ಲ ಹಸಿರಾಗಿ ಕಂಡರೂ 
ನಡುವೆ ಬೆಳೆದ ಜಾಲಿ ಮುಳ್ಳು ಚುಚ್ಚದಿರುವುದೇ 
ಕಾಮನಬಿಲ್ಲಿನ ಏಳು ಬಣ್ಣಗಳು ಸುಂದರವಾಗಿದ್ದರೂ 
ಅವುಗಳ ಸ್ಪರ್ಶ ಸುಖವು ಸಿಗುವುದೇ 
ಬಣ್ಣಗಳ ಲೋಕ ಕಣ್ಣಿಗೆ ಚಂದ ಕಂಡರೂ ಅವು ಶಾಶ್ವತವಲ್ಲ 
ಈ ಸತ್ಯ ದರ್ಶನ  ಎಂದಾಗುವುದೋ ನಾ ಅರಿತಿಲ್ಲ 

1 comment:

Badarinath Palavalli said...

ಸಹಸ್ರ ಕೆಡಕುಗಳ ನಡುವೆ ಇಲ್ಲದಲ್ಲ ಗುಲಗುಂಜಿಯಷ್ಟು ಒಳಿತೆಂಬ ದೈವ.