ನಿನ್ನ ಕಂಡ ಆ ದಿನ ಏನನ್ನು ಅರಿತಿರಲಿಲ್ಲ ನನ್ನ ಈ ಮನ
ಭಾವನೆ ಇಲ್ಲದೆ ನಿನ್ನಲ್ಲಿ ಬಂದಿದ್ದೆ ನಾ ಅಂದು
ಏನು ಮೋಡಿ ಮಾಡಿದೆಯೋ ನೀ ಎನಗೆ
ನಿನ್ನ ಅಗಲಿ ಇರಲಾಗುತ್ತಿಲ್ಲ ನನಗಿಂದು
ನಗುವಿರದ ತುಟಿಗಳಲ್ಲಿ ಮಂದಹಾಸ ಬೀರುತಿದೆ
ಕನಸಿಲ್ಲದ ಕಂಗಳಲ್ಲಿ ನೂರಾರು ಆಸೆಗಳು ಉದಯಿಸುತ್ತಿವೆ
ಬಾಡಿದ ಬಳ್ಳಿಯಂತಿದ್ದ ಈ ಮನಸಲ್ಲಿ ಮಂದಾರ
ಪುಷ್ಪವೊಂದು ಮೈದುಂಬಿ ಅರಳಿದೆ
ಪ್ರೀತಿ ಶುರುವಾದ ಆ ಕ್ಷಣ ಮನದಲ್ಲಿ ಆಗುತ್ತಿದೆ
ಏನೋ ಒಂದು ಸುಂದರ ರೋಮಾಂಚನ
ಮುಗಿಲ ಮಲ್ಲಿಗೆಯಂತೆ ಎತ್ತರಕ್ಕೆ ಇರಬೇಕು ಈ ಪ್ರೀತಿ
ಸ್ಪೂರ್ತಿಯ ಸೆಲೆಯಾಗಬೆಕು ನಾವಿಬ್ಬರೂ ಬಾಳುವ ರೀತಿ
1 comment:
ನೆಚ್ಚಿಗೆಯಾಯಿತು :)
Post a Comment