Friday, 31 August 2012

ಮನಸಾರೆ ಬರೆದಿದ್ದೆ 
ಒಂದು ಕವನ
ಅದಕ್ಕೊಂದು ಬಡಿಯಿತು 
ಅನುಮಾನ ಎಂಬ ಕಂಪನ  
ಆ ಕ್ಷಣಕ್ಕೆ ಆಯಿತು ನನ್ನ 
ಮನಸಲ್ಲಿ ನೋವು  ತಲ್ಲಣ 
ಅದಕ್ಕೆ ಮಾಡುವುದಿಲ್ಲ ತಾನೆ 
ನನ್ನನ್ನು ನಿನ್ನ  ಮನಸಿಂದ 
ನಿರ್ಗಮನ ...????

Thursday, 23 August 2012

ಹುಚ್ಚು ಕನಸಿನ ನೋವು

ನೆಪ ಮಾತ್ರಕ್ಕೆ ಇಷ್ಟಪಡಲ್ಲ ಅಂತ 
ಹೇಳಿ ಓಡಿ ಹೋದೆ ನಾನು 
ಆದರೆ ನನ್ನ ಕಣ್ಣಲ್ಲಿ ನಿನ್ನ ಮೇಲೆ ಇದ್ದ 

ಪ್ರೀತಿಯನ್ನ ಏಕೆ ಗುರ್ತಿಸಲಿಲ್ಲ ನೀನು

ಕಣ್ಣುಗಳೇ ಮನಸ್ಸಿನ ಭಾವನೆಯ
ಕನ್ನಡಿ ಅಂದುಕೊಂಡಿದ್ದೆ
ಆದರೆ ಆ ಕನ್ನಡಿಯನ್ನೇ ಒಡೆದು
ಹಾಕುವ ಮನಸೇಕೆ ಬಂತು ನಿನಗೆ

ಪ್ರೀತಿಯ ಮೋಹಕ್ಕೆ ಸೋತು ಶರಣಾಗಿ
ಬಂದೆ ಆದರೆ ಇದುವೇ ಏನು
ನೀ ಅದಕ್ಕೆ ಕೊಟ್ಟ ಉಡುಗೊರೆ
ಉಸಿರು ಉಸಿರಲ್ಲೂ ಮಿಡಿಯುತಿರುವೆ ನೀ ಇನ್ನೂ

ಆದರೆ ನನಗಿರುವ ಒಂದೇ ಚಿಂತೆ
ನೀ ದೂರವಾದೆ ಏಕೆ ಎಂಬ ಚಿಂತೆ
ನಿನ್ನ ನೆನಪಲ್ಲೇ ಮಿಂದು ಬೆಂದು
ಹುಚ್ಚಿಯಗಿರುವೆ ನಾನು

ಈ ಹುಚ್ಚಿಯ ಮನಸು ಕಂಡಿತು
ನಿನ್ನ ಬಗ್ಗೆ ಒಂದು ಹುಚ್ಚು ಕನಸು
ಈ ಮನಸ್ಸಿನ ಪ್ರೀತಿ ಕನಸಲ್ಲಿ ಸತ್ಯವಾಗಿದೆ
ಆದರೆ ವಾಸ್ತವದಲ್ಲಿ...?????

Monday, 13 August 2012

ಪ್ರೀತಿಯ ಬಂಧನ



ನನ್ನ ಜೀವನದ ಪ್ರತಿ ಕ್ಷಣ
ಬಯಸುವುದು ನಿನ್ನ ಮನಸಿನ ಮಿಲನ
ನನ್ನ ಜೀವಕ್ಕೆ ಜೀವವಾಗಿರುವೆ  ನೀನು
ನಿನ್ನ ಉಸಿರಿಗೆ ಉಸಿರಾಗುವೆ  ನಾನು

ನಿನ್ನ ಪ್ರೀತಿಯ ಸೆಳೆತಕ್ಕೆ
ಸಿಕ್ಕಿರುವೆ ನಾನು
ನನ್ನ ಹೃದಯದ ಪ್ರತಿ ಮಿಡಿತದಲ್ಲೂ 
ಬೆರೆಯಬೇಕು ನೀನು

ನಾದವ ಹೊಮ್ಮುವ ವೀಣೆಯು ನಾನಾಗಿ
ತಂತಿಯ ಮೀಟುವ ವೈಣಿಕ ನೀನಾಗಬೇಕು 
ರಾಗ ತಾಳ ಭಾವ ಸೇರಿದರೆ ಬರುವ 
ಅನನ್ಯ ಸಂಗೀತದಂತೆ 
ನನ್ನ ನಿನ್ನ ಬಂಧನ ಅನನ್ಯ 
ಅನುಬಂಧವಾಗಬೇಕು 

ಮಲ್ಲಿಗೆ ಸಂಪಿಗೆ ಸೇರಿದರೆ ಬರುವ 
ಅನನ್ಯ ಸುಗಂಧದಂತೆ 
ಹೂವು ಶ್ರೀಗಂಧ ಬೀರುವ ಪರಿಮಳದ
ಹಾಗೆ ನನ್ನ ನಿನ್ನ ಪ್ರೀತಿಯ ಕಂಪು
ಈ ಜಗದಲ್ಲಿ ಬೀರಬೇಕು

ಮನದ ನೋವು

ಯಾರಿಗೆ ಯಾರೂ ಇಲ್ಲದ 
ಈ ಜಗತ್ತಲ್ಲಿ ನಮಗೆ ಕೇವಲ
ನಾವೇ ನೋಡಬೇಕು 

ಮನಸ್ಸಿಗೆ ನೋವಾದಾಗ 
ಯಾರು ಇಲ್ಲದಿದ್ದರೆ 
ಬರುವುದು ಕಣ್ಣೀರು 

ಜೀವನ ಎಂದರೆ 
ಸುಖ ದುಖದ ಸಮ್ಮಿಲನ
ಆದರೆ ಬರೀ ದುಖವೇ ಜೀವನವಾದರೆ
ಅರ್ಥವಿರುವುದೇ ಈ ಜೀವಕೆ..????

ಕನಸಲಿ ಕಂಡದ್ದೆಲ್ಲ ಸತ್ಯವಾದರೆ
ಮನಸಿಗೆ ನೋವೆಲ್ಲಿ?
ಮನಸಿನ ಆಸೆಯಲ್ಲ ಈಡೆರಿಬಿಟ್ಟರೆ
ಕನಸಿಗೆ ಜಾಗವೆಲ್ಲಿ..???

Sunday, 12 August 2012

ಚುಟುಕು ಕವನಗಳು




ಲೇಖನಿ
************
ಕೈಯಲ್ಲಿ ಹಿಡಿದರೆ ಲೇಖನಿ
ಮೂಡುವುದು ಅಕ್ಷರದ ಖನಿ
ಕೈಯಲ್ಲಿ ಹಿಡಿದರೆ ಲೇಖನಿ
ಮೂಡುವುದು ಚಿತ್ತಾರದ ಗಣಿ

ಅತ್ತೆ
********
ನನ್ನ ಮುದ್ದಿನ ಅತ್ತೆ
ಅವಳು ನಕ್ಕರೆ ಬೀಳುವುದು
ಮುತ್ತಿನ ಕಂತೆ
ನನ್ನ ಮುದ್ದಿನ ಅತ್ತೆ
ಅವಳು ಸಿಟ್ಟಾದರೆ ಬೀಳುವುದು
ಬೈಗುಳದ ಕಂತೆ

ಗುಲ್ಲು
********
ನನ್ನ ತಂಗಿಗೆ ನಾನಿಟ್ಟಿರುವ ಹೆಸರು ಗುಲ್ಲು
ಅವಳಿದ್ದರೆ ನನ್ನ ಬಾಳು ಹಸಿರು ಹುಲ್ಲು
ಅವಳಿಲ್ಲದಿದ್ದರೆ ನನ್ನ ಬಾಳು ಗಟ್ಟಿ ಕಲ್ಲು

ಕೋಗಿಲೆ
**********
ಕುಹೂ  ಕುಹೂ ಹಾಡುವೆ ನೀ ಕೋಗಿಲೆ
ನನಗೆ ಯಾವಾಗ ಕಲಿಸುವೇ ನೀ ಹೇಳೆಲೆ
ಕುಹೂ  ಕುಹೂ ಹಾಡುವೆ ನೀ ಕೋಗಿಲೆ
ನನಗೂ ಕಲಿಸಲು ಬೇಗನೆ ನೀ ಬಾರೆಲೇ

ಆಸರೆ
*********
ರವಿಗೆ ಆಕಾಶವೇ ಆಸರೆ
ಶಶಿಗೆ ರವಿಯೇ ಆಸರೆ
ಆದರೆ ಶಶಿಯೇ ನನಗೆ
ನಿನ್ನ ಬೆಳದಿಂಗಳೇ ಆಸರೆ

ಪ್ರೀತಿ
********
ಬಾಳಲ್ಲಿ ಇರಬೇಕು ಪ್ರೀತಿ
ಅದೇ ನಮ್ಮ ಬಳಿಗೆ ಸ್ಪೂರ್ತಿ
ಬಾಳಲ್ಲಿ ಇದ್ದರೆ ಪ್ರೀತಿ
ಆಗುವುದು ನಮ್ಮ ಬಾಳು ನಿರ್ಭೀತಿ

ಸ್ನೇಹ-ಪ್ರೀತಿ
*****************
ಸ್ನೇಹಕ್ಕೆ ಶರಣಾಗದವರಿಲ್ಲ
ಪ್ರೀತಿಗೆ ಸೋಲದವರಿಲ್ಲ
ಸ್ನೇಹ ಪ್ರೀತಿ ಅನುಭವಿಸುವರ
ಬಾಳು ಹಸನಾಗದಿರುವುದಿಲ್ಲ