Friday, 18 July 2014

ನೀನಿರದ ಹೊತ್ತು ಬಂತೊಂದು ಚಂದಿರನ ಮುತ್ತು 
ನಾಚಿ ನೀರಾದ ಕೆನ್ನೆಯ ತುಂಬೆಲ್ಲ  ನಿನ್ನದೇ ಗತ್ತು 
ಚಿಪ್ಪೊಳಗೆ ಮುಚ್ಚಿಟ್ಟಿದ ಮುತ್ತು ನಾನಾದರೆ 
ಮನಸಿನ ತಂಪು ಕಳವಳವೆಲ್ಲ ದೂರಾಗಿಸಿದ ಬಿಸಿ ಮುತ್ತು ನೀನು 
ಏ ಹುಡುಗ ನೀನಿರದ ಸಮಯವ ನೀನಿರುವೆ 
ಎಂದು ಕಲ್ಪಿಸುತ್ತ ಆಗಸದಲಿ ನಿನ್ನ  ಹುಡುಕುತ್ತಾ 
ಮನ ನೊಂದ ಹೊತ್ತಲ್ಲಿ ಆ ಶಶಿಯ ನೋಡುತ್ತಾ 
ಕುಳಿತಿರುವೆ  ನೀ ಬರುವ ದಾರಿಯ ಕಾಯುತ್ತಾ 

1 comment:

Badarinath Palavalli said...

ಈ ರಚನೆಯಲ್ಲಿ ತಾವು ಹೆಣೆದಿರುವ ರೀತಿಯಲ್ಲಿನ ಲಾಲಿತ್ಯತೆ ಮೊದಲು ಮನಸೆಳೆಯಿತು.