ನೀನಿರದ ಹೊತ್ತು ಬಂತೊಂದು ಚಂದಿರನ ಮುತ್ತು ನಾಚಿ ನೀರಾದ ಕೆನ್ನೆಯ ತುಂಬೆಲ್ಲ ನಿನ್ನದೇ ಗತ್ತು ಚಿಪ್ಪೊಳಗೆ ಮುಚ್ಚಿಟ್ಟಿದ ಮುತ್ತು ನಾನಾದರೆ ಮನಸಿನ ತಂಪು ಕಳವಳವೆಲ್ಲ ದೂರಾಗಿಸಿದ ಬಿಸಿ ಮುತ್ತು ನೀನು ಏ ಹುಡುಗ ನೀನಿರದ ಸಮಯವ ನೀನಿರುವೆ ಎಂದು ಕಲ್ಪಿಸುತ್ತ ಆಗಸದಲಿ ನಿನ್ನ ಹುಡುಕುತ್ತಾ ಮನ ನೊಂದ ಹೊತ್ತಲ್ಲಿ ಆ ಶಶಿಯ ನೋಡುತ್ತಾ ಕುಳಿತಿರುವೆ ನೀ ಬರುವ ದಾರಿಯ ಕಾಯುತ್ತಾ
Thursday, 17 July 2014
ನೆನ್ನೆ ಕಳೆದ ನೆನಪುಗಳ ನಾಳೆ ಬರುವ ಚಿಂತೆಗಳ ಬೆರೆಸಿ ಇಂದು ಎಂಬ ಅಮೂಲ್ಯ ಸಮಯವ ಕಳೆಯಬೇಡ ಕಾರಣ ನೆನ್ನೆಗೆ ಮರುಹುಟ್ಟಿಲ್ಲ ನಾಳೆಗೆ ಕೊನೆಯಿಲ್ಲ
Wednesday, 16 July 2014
ಓ ಸಾವೇ ನೀನೆಷ್ಟು ಸುಂದರ ಬಂದರೆ ನೀನು ಹತ್ತಿರ ಮನದ ನೋವೆಲ್ಲಾ ಓಡುವುದು ದೂರ
Monday, 14 July 2014
ಮರೆಯಬೇಕೆಂದರೂ ಮರೆಯಲಾಗದ ನೆನಪೊಂದು ಮತ್ತೆ ಮತ್ತೆ ಬಂದು ಕಾಡುತಿದೆ ಬೇಕೆಂದರೂ ಬಾರದ ನೆನಪೊಂದು ಮತ್ತಷ್ಟು ದೂರ ದೂರ ಸಾಗುತಿದೆ ಯಾವ ಜನ್ಮದ ಅನುಬಂಧವೋ ನಾ ಕಾಣೆ ಬೇಡದ ವರವ ಕೊಟ್ಟು ಬೇಕಾದ ಬಾಳನು ಕಿತ್ತು ನನ್ನ ಒಂದು ಗೊಂಬೆಯಂತೆ ಆಡಿಸುತಿರುವೆ ನಿನ್ನ ಆಟಕೆ ಅಂತ್ಯವಿಲ್ಲ ನನ್ನ ಪ್ರಶ್ನೆಗಳಿಗೆ ಉತ್ತರವಿಲ್ಲ ನನ್ನ ಉಸಿರು ನಿಲ್ಲುವ ಮುನ್ನ ಉತ್ತರಿಸು ತಲೆಯಲ್ಲಿ ನರ್ತಿಸುತಿರುವ ನೂರಾರು ಸಂದೇಹಗಳ ದೂರಾಗಿಸು ಓ ದೇವಾ
Sunday, 6 July 2014
ನನ್ನಲ್ಲಿ ಒಲವಿನ ಉಗಮ ನಿನ್ನಿಂದ ನಿನ್ನಲ್ಲಿ ಆಸೆಗಳ ಚಲನ ನನ್ನಿಂದ ಒಲವಿನ ಜನನಕ್ಕೆ ಕಾರಣ ನಾ ಅರಿಯೆ ಮನಸಿನ ಮಿಲನದ ಆಳವ ನೀ ತಿಳಿಯೇ ಎಲ್ಲಾಯಿತು ಎಂದಾಯಿತು ಆ ಒಲವು ಬೇಡೆನಗೆ ಬೇರೆಲ್ಲೂ ಹೋಗದಂತೆ ತಡೆ ನೀ ಅದನು ಕೊನೆವರೆಗೆ