ಹೂವೇ ನಿನ್ನ ಬದುಕೇ ಸುಂದರ
ಬೆಳಗಿನ ಜಾವ ಮಂಜಿನ ಹನಿಗಳಿಂದ
ಸುಂದರವಾಗಿ ಕಾಣುವೆ
ನಗುವಿರದ ಮುಖವು ನಿನ್ನ
ನೋಡಿದರೆ ಸಾಕು ಕ್ಷಣಮಾತ್ರದಲ್ಲೇ
ನಗು ಅರಳುವುದು ಮೊಗದಲ್ಲಿ
ಹೆಣ್ಣಿನ ಮುಡಿಗೆ ಚಂದ ನೀನು
ಪ್ರೀತಿಯ ಭಾವಕ್ಕೆ ಬಣ್ಣ ನೀನು
ಕವಿಗಳ ಕವಿತೆಗೆ ಸ್ಪೂರ್ತಿ ನೀನು
ದೇವರ ಶಿರಕ್ಕೂ ಮುಡಿಸುವರು ನಿನ್ನನ್ನೇ
ಚರಣ ಕಮಲಕ್ಕೂ ಇಡುವರು ನಿನ್ನನ್ನೇ
ಎಂತಹ ಪುಣ್ಯ ಜೀವ ನಿನ್ನದು ಹೂವೆ
ಬೆಳಗ್ಗೆ ಉದಯಿಸಿ ಸಂಜೆ
ಮುಳುಗುವ ನಿನ್ನ ಬದುಕು ಎಷ್ಟು
ಸುಂದರವೋ ಅಷ್ಟೇ ಸಾರ್ಥಕ
No comments:
Post a Comment