ಮನದ ಪ್ರೀತಿಯ ಗಮನಿಸದೆ
ಮುಖದ ಮೇಲಿನ ಪ್ರೀತಿಗೆ ಮುಗಿಬಿದ್ದೆ ನೀನು
ಮನದಲ್ಲಿ ಅಡಗಿದ್ದ ಆಳ
ಭಾವನೆಯನ್ನು ಅರಿಯದೆ
ಮುಖದಲ್ಲಿರದ ಮಂದ
ಭಾವವನ್ನು ಹುಡುಕುತಿರುವೆ
ಕಾದಿದ್ದೆ ನನ್ನ ಹೃದಯದಲ್ಲಿ ನಿನ್ನ ತುಂಬಿಕೊಳ್ಳಲು
ಹೊರಟೋದೇ ಏಕೆ ನನ್ನ ತೊರೆದು ನೀನು
ಕಾಣದ ಪ್ರೀತಿಯ ಹುಡುಕದಿರು
ಕಾಣುವ ಪ್ರೀತಿಯ ತೊರೆಯದಿರು
ಸಿಕ್ಕ ಪ್ರೀತಿಯ ಬಿಟ್ಟು ಸಿಗದ ಪ್ರೀತಿಯ
ಹುಡುಕುತ್ತ ಕೊರಗದಿರು
ಒಲವ ಸುಧೆಯ ಹರಿಸುತಿರುವೆ ನಿನಗಾಗಿ ನಾನು
ಕಣ್ಣೀರ ಸಾಗರದಲಿ ಮುಳುಗಿಸದಿರು ನನ್ನ ನೀನು
No comments:
Post a Comment