ನಿನ್ನ ಸನಿಹವೆಷ್ಟು ಸುಂದರ ಗೆಳೆಯ
ನೀ ನಗಲು ಹೂವು ಕಂಡಂತೆ
ನೀ ನುಡಿಯಲು ಮಧುರ ಸಂಗೀತದಂತೆ
ಬಳಿ ನೀ ಬರಲು ಮಿಂಚು ಹರಿದಂತೆ
ನನ್ನ ಸೆಳೆಯಿತು ನಿನ್ನ ಕಣ್ಣೋಟ
ನಿನ್ನಲ್ಲಿ ಬೆರೆಯಿತು ನನ್ನ ಉಸಿರಾಟ
ನೀ ಸುರಿಸುವ ಒಲವಿನ ಮಳೆಗೆ
ಪ್ರೀತಿಯಾಗಿದೆ ನನ್ನ ಹೃದಯದ ಇಳೆಗೆ
ನಿನ್ನ ಸ್ನೇಹದ ಪರಿಯೇನು ಪ್ರೀತಿಯ ಭಾವವೇನು
ನನ್ನ ಬಾಳಲ್ಲಿ ತಂಗಾಳಿ ಬೀಸುತಿರುವೆ
ಕನಸಲಿ ಬಂದು ಕಾಡುತಿರುವೆ
ಮನಸಿನ ಆಸೆಯ ಕಲಕುತಿರುವೆ
ನಿನ್ನಲ್ಲಿ ಕಳೆದ ಸುಮಧುರ ಕ್ಷಣಗಳ
ಮತ್ತೆ ಮತ್ತೆ ನೆನೆಯುವ ಆಸೆ ನನ್ನದು
ಸ್ವಪ್ನದಲ್ಲಿ ಕಂಡ ನಿನ್ನ ಮಡಿಲಲ್ಲಿ
ಮತ್ತೆ ಮತ್ತೆ ಮಲಗುವಾಸೆ ನನ್ನದು
ನನ್ನಿಂದ ದೂರಗದಿರು ಗೆಳೆಯ
ನಾ ಕಳೆದುಕೊಲ್ಲಲಾರೆ ನಿನ್ನ ಸನಿಹ
ಬೀಸುವ ಗಾಳಿಯಂತೆ ನೀ ಓಡಬೇಡ
ವಿರಹದಲ್ಲಿ ನನ್ನ ಬೇಯಿಸಿ ಕೊಲ್ಲಬೇಡ
No comments:
Post a Comment