Friday, 12 October 2012

ಪ್ರೀತಿಯ ಹಾರೈಕೆ



ನಗುವ ನಯನದಲ್ಲಿ ಖುಷಿಯ ನೋಡಿ
ಕೆಂದುಟಿ ಅಲ್ಲಿ   ಸೂಸಿದ ಹೂನಗೆಯ ಬೆರೆಸಿ 
ಮಧುರ ಭಾವನೆಯ ನೋಟವನ್ನು ಮನಸಲಿ ತರಿಸಿ 
ನಿನ್ನ ಹೃದಯ ತುಂಬಲಿ ಒಲವಿನ ಆಸರೆಯಲ್ಲಿ 

ಅಂದದ ಮೊಗದಲ್ಲಿ ಚಂದದ ನಗುವಿರಲಿ 
ನಿರ್ಮಲವಾದ ಮನಸಲ್ಲಿ ಸ್ನೇಹ ಸದಾ ಇರಲಿ 
ಕಪಟವಿಲ್ಲದ ಮಾತಿನಲ್ಲಿ ಪ್ರೀತಿಯ ಛಾಯೆ ಹರಿಯಲಿ 
ನಿನ್ನ ಜೀವನದ ಸುತ್ತ ಪ್ರೀತಿ ಸ್ನೇಹ ಎಂಬ 
ಸುಳಿಗಳು ಸದಾ ಸುತ್ತುತ್ತಿರಲಿ 

ನೋವು ಸಂಕಟ ದುಖಗಳನ್ನು 
ಸಹಿಸುವ ಸಂಯಮ ಇರಲಿ
ಜೀವಕ್ಕೆ ಜೀವನಕ್ಕೆ  ಉಸಿರಾಗುವ 
ಬಾಳಸಂಗಾತಿ ಸಿಗಲಿ
ಸದಾ ಹರುಷದ ಹೊನಲಲ್ಲಿ 
ತೇಲಲಿ  ನಿನ್ನ ಜೀವನ 

ಆ ನಿನ್ನ ಸಂಗಾತಿ ನಿನ್ನ ಒಲವಲ್ಲಿ 
ನಿನ್ನ ಪ್ರೇಮದ ಸಾಗರದಲಿ
ಮಿಂದು ಪ್ರೀತಿಯ ಕರಗಳಲ್ಲಿ 
ಕರಗಿ ಉಸಿರಿಗೆ ಉಸಿರಾಗಿ 
ಕನಸಿಗೆ ನನಸಾಗಿ ಕಣ್ಣೀರಿಗೆ 
ಅನಂದಭಾಷ್ಪವಾಗಿ 
ದುಃಖಕ್ಕೆ ಸುಖವಾಗಿ ಬಾಳಲಿ

Saturday, 6 October 2012

ಜೀವನ ಏಕೆ ಹೀಗೆ..??

ನಾವಂದುಕೊಂಡ ಹಾಗೆ ಏನು ಆಗದು
ಇರುವ ವಾಸ್ತವವನ್ನು ಈ ಮನಸು ಒಪ್ಪದು
ಏನಿದು ಈ ಹುಚ್ಚು ಮನಸಿನ ಆಟ
ಇದು ಎಂದಿಗೆ ಕಲಿಯುವುದು ಜೀವನದ ಪಾಠ .

ಸಂಕಟದಲ್ಲಿರುವ ಮನಸಿಗೆ ಸಂತಸದಿಂದಿರುವ 
ಮನಸನ್ನು ಕಂಡರೆ ಆಗದು ಅದು ಕೇಳುವುದು 
ಈ ಜಗದಲಿ ನನಗೆ ಏಕೆ ದುಃಖ ಅನ್ಯರೆಲ್ಲ 
ಖುಷಿಯಾಗಿರುವವರಲ್ಲ ನನಗೆ ಏಕೆ ಈ ದುಃಖ 

ಆದರೆ ಆ ನೊಂದ ಮನಸಿಗೇನು ಗೊತ್ತು ಅದು 
ಅಂದುಕೊಂಡ ಅನ್ಯರಿಗೆ ತಾನೂ ಕೂಡ ಅವರಿಗೆ 
ಅನ್ಯ ಎಂದು..ಓ ಮನಸೇ ಮರುಗಬೇಡ ಇಲ್ಲಿ ಯಾರು 
ಸುಖಿಗಳಲ್ಲ ಎಲ್ಲರೂ ದುಖಿಗಳಲ್ಲ ಎಲ್ಲವು ಕ್ಷಣಿಕ ಅಷ್ಟೇ 

ನೀನರಿಯದ ಜೀವನವನ್ನು ಅರಿತು ಬಾಳಿದರೆ
ನಿನಗಿರುವುದಿಲ್ಲ ಯಾವುದೇ ದುಃಖ 
ಪರರ ಬಾಳಿಗೆ ನಿನ್ನ ಬಾಳನ್ನು ಹೋಲಿಸದೆ 
ನಿನ್ನ ಬಾಳು ಪರರಿಗೆ ಸ್ಪೂರ್ತಿಯಾಗುವಂತೆ ಬಾಳು ಮನಸೇ

ಓ ಮನಸೇ ನೀ ಬಾರದಿರುವ ಅದೃಷ್ಟಕ್ಕೆ ಕಾಯದಿರು 
ನಗುವ ನಯನವನ್ನು ಮೊಗದಲ್ಲಿ ಮನೆ ಮಾಡಿ
ಹೂ ಅರಳಿದಾಗ ಕಾಣುವ ಸೌಂದರ್ಯದಂತೆ 
ನಿನ್ನ ತುಟಿಯನ್ನು ಅರಳಿಸಿ ನಗುತಿರು ಎಂದೆಂದಿಗೂ 

ಬಾರದಿರುವದನ್ನು ಬರಿಸಲು ಸಾದ್ಯವೇ 
ಬರುವುದನ್ನು ತಪ್ಪಿಸಲು ಸಾದ್ಯವೇ 
ಈ ಸತ್ಯ ಅರಿತು ಜೀವನದಲ್ಲಿ ಎಲ್ಲರೊಂದಿಗೆ 
ಬೆರೆತು ಬಾಳಿದರೆ ಸಾರ್ಥಕವಾಗುವುದಲ್ಲವೇ ನಿನ್ನ ಜೀವನ

Wednesday, 3 October 2012

ನೊಂದ ಹೃದಯದ ವೇದನೆ


ಮನ ಬಂದಂತೆ ಪ್ರೀತಿಸಿದೆ ನಾ ನಿನ್ನ
ಮನ ಬಂದಂತೆ ಹಿಂಸಿಸುತ್ತಿರುವೆ ನೀ ನನ್ನ
ಮನವೇಕೊ ಇಂದು ಕನವರಿಸುತ್ತಿದೆ ನಿನ್ನ
ಅರಿಯದೆ ಮಾಡಿದ ಪ್ರೀತಿಗೆ ಅರಿತು
ನೀ ಕೊಟ್ಟ ಹಿಂಸೆಯೇ ಉಡುಗೊರೆಯೇ...???

ನಿರ್ಮಲವಾದ ನನ್ನ ಪ್ರೀತಿಗೆ ಅನುಮಾನ
ಎಂಬ ಬೆಂಕಿ ಹಚ್ಚಿ ಹೋದೆ ನೀನು
ಕಣ್ಣಲ್ಲಿ ಸುರಿಯುವ ಸಂಕಟದ ನೀರಿಗೆ
ನಿನ್ನ ಕೈ ಅಳುವ ನನ್ನನ್ನು ಸಂತೈಸದೆ ಆ
ಕೈಯೇ ಕಣ್ಣನ್ನು ತಿವಿದರೇ ಸಹಿಸುವುದೇ ಈ ಹೃದಯ..??

ಸಾಗರದ ನೀರಲ್ಲಿ ಆ ಚಂದ್ರಮನ ಬಿಂಬ ಕಾಣುವಂತೆ
ನಿನ್ನ ಕಣ್ಣಲ್ಲಿ ನನ್ನ ಪ್ರತಿಬಿಂಬ ಕಾಣಲೆಂದು ನಾ ಬಯಸಿದರೆ
ನನ್ನ ಕಣ್ಣಲ್ಲಿ ಇದ್ದ ಆ ಪ್ರೀತಿಯ ಭಾವನೆಯನ್ನು
ನಿನ್ನ ಕಣ್ಣುಗಳು ನೋಡಿದರು ಗುರಿತಿಸದೆ ಹೋದವು ಈ
ಆಘಾತವನ್ನು ನನ್ನ ಮನ ಸಹಿಸುವುದೆಂದು ತಿಳಿದಿರುವೆಯಾ..??

ಈ ಹುಚ್ಚು ಮನಸು ಕಂಡಿತು ನಿನ್ನ ಪ್ರೀತಿಯ ಕನಸು
ಹುಡುಕುತ್ತ ಹೋಗುವೆ ನನ್ನ ಪ್ರೀತಿಯನ್ನು
ಅದು ಸಿಗುವ ಲಕ್ಷಣ ಇಲ್ಲ ನನಗಿನ್ನು
ಅದರೂ ಬಿಡುವುದಿಲ್ಲ ನನ್ನ ಪ್ರೀತಿಯನ್ನು
ಆ ಪ್ರೀತಿ ಸಿಗುವುದೇ ನನಗಿನ್ನು.....??????????????

Monday, 1 October 2012

ಕಾದಂಬರಿ

ಏನೆಂದು ಬರೆಯಲಿ ನಾ ನಿನಗಾಗಿ
ಪದಗಳೇ ಸಾಲದಾಗಿದೆ 
ಈ ಖಾಲಿ ಹಾಳೆಯಲ್ಲಿ ಎಷ್ಟು ಗೀಚಿದರೂ
ಅದು ಸರಿಸಾಟಿಯಾಗುತ್ತಿಲ್ಲ ನಿನ್ನ ಪ್ರೀತಿಗೆ 

ಹೇಗೆ ತುಂಬಿಸಲಿ ನನ್ನ ಪ್ರೀತಿಯ
ಕಾದಂಬರಿಯನ್ನು 
ಯಾವ ಬಣ್ಣದಿಂದ ಬರೆಯಲಿ 
ನನ್ನ ಭಾವನೆಗಳ ಸಾಲನ್ನು 

ಪ್ರೀತಿ ಪ್ರೇಮ ಎಂಬ ಬಣ್ಣಗಳೊಂದಿಗೆ 
ಹಾಲು ಜೇನಿನ ಹಾಗೆ ಬೆರೆತು 
ಸ್ನೇಹ ತ್ಯಾಗದ ಅನುಬಂಧದ ಹಾಗೆ 
ನನ್ನ ಕಾದಂಬರಿಯನ್ನು ಪೂರ್ಣ ಮಾಡಿ

ನಿನ್ನ ಮನಸಿನ ಕನ್ನಡಿಯ ಮುಂದೆ ಆ
ಕಾದಂಬರಿಯನ್ನು ಇಟ್ಟು ಅದರ ಪ್ರತಿ 
ಪುಟವನ್ನು ತಿರುವಿದರೆ ಆ ಭಾವನೆಗಳ 
ಪ್ರತಿಬಿಂಬ ನಿನ್ನ ಮುಖದಲ್ಲಿ ಮೂಡಲಿ