ಕತ್ತಲು ಎನ್ನುವುದು ಬೆಳಕಿನ ವಿರೋಧಿಯಲ್ಲ ಕೇವಲ ಬೆಳಕಿನ ಅನುಪಸ್ಥಿತಿಯಷ್ಟೇ ಅಂತೆಯೇ ಸಮಸ್ಯೆ ಎನ್ನುವುದು ಯೋಜನೆಗಳ ಅನುಪಸ್ಥಿತಿಯೇ ಹೊರತು ಪರಿಹಾರದ ಅನುಪಸ್ಥಿತಿಯಲ್ಲ
ನನ್ನ ಮೌನವೇ ನನ್ನ ನೋವಿನ ಪ್ರತಿರೂಪ ಅದು ಮಾಡುವುದಿಲ್ಲ ಯಾರಮೇಲೂ ಆರೋಪ ಸಮಯ ಸಾಗಿದಂತೆ ಕರಗುವುದು ನೋವು ತಾಳ್ಮೆಯಿಂದ ಬಾಳಿದರೆ ಆ ನೋವಿಗೂ ಬರುವುದು ಸಾವು ನೋವಿಗೆ ಸಾವು ಬಂದಮೇಲೆ ಎಲ್ಲಿರುವುದು ಸೋಲಿನ ದುಃಖ ಮೌನಕ್ಕೆ ಶರಣಾದ ಮನಸಿಗೆ ಸಿಕ್ಕೇ ಸಿಗುವುದು ಗೆಲುವಿನ ಸುಖ
Friday, 7 October 2016
ನಾಟ್ಯಸರಸ್ವತಿ ಶಾಂತಲೆ ನೀನೆಷ್ಟು ಕೋಮಲೆ ಅಂದದಲ್ಲಿ ಅಪ್ಸರೆ ಗುಣದಲ್ಲಿ ಶಾರದೆ ನಿನ್ನ ಓದಿದ ನನ್ನ ಮನತುಂಬಾ ಕಾಡುತಿದೆ ನಿನ್ನ ಕಲೆ ಕಾದಿರುವೆ ನೋಡಲು ನಿನ್ನ ಸೌಂದರ್ಯದ ಸೆಲೆ ಬೇಗನೆ ಕರೆಸಿಕೋ ಸುಂದರ ಶಿಲೆಗಳ ನಾಡಿಗೆ
Thursday, 6 October 2016
ಬರೆದು ಬರೆದು ಬರಿದಾಗಿದೆ ಕಲ್ಪನೆಯ ಕಡಲು ಏನು ಮಾಡಿದರೂ ಬರಿದಾಗದು ಭಾವನೆಗಳ ಒಡಲು ಅದಕಾಗಿಯೇ ಸದಾ ಬಯಸುವೆ ಕವನದ ಮಡಿಲು
Wednesday, 5 October 2016
ಯಶಸ್ವಿ ಮದುವೆ ಎನಿಸುವುದು ಒಂದು ಪರಿಪೂರ್ಣ ಜೋಡಿ ಒಟ್ಟಾಗಿದ್ದಾಗಲ್ಲ ಒಂದು ಅಪೂರ್ಣ ಜೋಡಿ ತಪ್ಪುಗಳನ್ನು ಆನಂದಿಂದ ಆಸ್ವಾದಿಸಿ ತಿದ್ದುವುದನ್ನು ಕಲಿತಾಗ
Monday, 3 October 2016
ಜೀವನದಲ್ಲಿ ತುಂಬಾ ಭಾವನಾತ್ಮಕವಾಗಿದ್ದರೆ ನೋಯುವುದು ನಿನ್ನ ಮನ ಅದೇ ಜೀವನದಲ್ಲಿ ಪೂರ್ತಿ ಪ್ರಾಯೋಗಿಕವಾಗಿದ್ದರೆ ನೋಯುವುದು ಪರರ ಮನ
Sunday, 2 October 2016
ತಾತ್ಕಾಲಿಕ ಭಾವನೆಗಳ ಜೊತೆ ಒದ್ದಾಟ ಶಾಶ್ವತ ನಿರ್ಧಾರಗಳ ಪರದಾಟ ಎರಡರ ನಡುವೆ ಜೀವನದ ಹೋರಾಟ