ಮನದ ಮರೆಯಲ್ಲಿ ಅವಿತು ಕುಳಿತಿದೆ ಕತ್ತೆಲೆಯೊಂದು
ಅದನು ಆಚೆ ಓಡಿಸಲು ಬೇಕೊಂದು ಆತ್ಮವಿಶ್ವಾಸದ ಬೆಳಕು
ಕತ್ತಲೆ ಕಳೆದು ಬೆಳಕು ಹರಿದರೆ ಅದು ನಿಸರ್ಗ
ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಿದರೆ
ಆ ಕ್ಷಣ ಆಗುವುದು ಬದುಕೊಂದು ಸ್ವರ್ಗ
ಬೇಡದ ಜೀವನ ಸಿಕ್ಕಿತೆಂದು ಕೊರಗಬೇಡ
ಸಿಕ್ಕ ಜೀವನದ ಸುಖವ ಅನುಭವಿಸದೆ ಸಾಯಬೇಡ
ಜೀವಕ್ಕೂ ಜೀವನಕ್ಕೂ ಬೇಕಾಗಿದೆ ನಂಬಿಕೆಯ ಸೂರು
ಅದ ಕಳೆದುಕೊಂಡು ಹುಡುಕಬೇಡ ನೆಮ್ಮದಿಯ ಗೂಡು
ಅದನು ಆಚೆ ಓಡಿಸಲು ಬೇಕೊಂದು ಆತ್ಮವಿಶ್ವಾಸದ ಬೆಳಕು
ಕತ್ತಲೆ ಕಳೆದು ಬೆಳಕು ಹರಿದರೆ ಅದು ನಿಸರ್ಗ
ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಿದರೆ
ಆ ಕ್ಷಣ ಆಗುವುದು ಬದುಕೊಂದು ಸ್ವರ್ಗ
ಬೇಡದ ಜೀವನ ಸಿಕ್ಕಿತೆಂದು ಕೊರಗಬೇಡ
ಸಿಕ್ಕ ಜೀವನದ ಸುಖವ ಅನುಭವಿಸದೆ ಸಾಯಬೇಡ
ಜೀವಕ್ಕೂ ಜೀವನಕ್ಕೂ ಬೇಕಾಗಿದೆ ನಂಬಿಕೆಯ ಸೂರು
ಅದ ಕಳೆದುಕೊಂಡು ಹುಡುಕಬೇಡ ನೆಮ್ಮದಿಯ ಗೂಡು
No comments:
Post a Comment