ಪದಗಳಿರುವ ತನಕ ಕವಿತೆ ಬರೆಯುವೆ ನಿನಗಾಗಿ ಧ್ವನಿ ಇರುವ ತನಕ ಹಾಡುವೆ ನಿನ್ನ ಕಿವಿಗಾಗಿ ಉಸಿರಿರುವ ತನಕ ಕಾಯುವೆ ನೀ ಬರುವ ಕ್ಷಣಕ್ಕಾಗಿ ಕೊನೆತನಕ ನೀ ಬಾರದಿದ್ದರೂ ಚಿಂತೆಯಿಲ್ಲ ನಿನ್ನ ಮನಸಲ್ಲಾದರು ಇಟ್ಟುಕೋ ಈ ನವಿರು ಭಾವಗಳ ಸಂಗಮವಾಗಿ ಹರಿಸಿದ ಕವನವ ನನ್ನ ಒಲವಿನ ಉಡುಗೊರೆಯಾಗಿ
Wednesday, 5 February 2014
ಭಾವನೆಗೆ ಬಣ್ಣವಿಲ್ಲ ಮನಸಿಗೆ ವಾಸನೆ ಇಲ್ಲ ಒಲವಿಗೆ ಕಲ್ಪನೆ ಇಲ್ಲ ಆದರೂ ಇವೆಲ್ಲವುಗಳ ಮಿಶ್ರಣದಿಂದ ಬರೆದ ಕವಿತೆ ಮಾತ್ರ ಸುವಾಸನೆ ಬೀರದೇ ಇರುವುದಿಲ್ಲ
ಹುಣ್ಣಿಮೆಯ ರಾತ್ರಿಯಲಿ ಹೊಳೆಯುವ ಚಂದ್ರನಂತೆ ನಿನ್ನ ತೋಳಲ್ಲಿ ನಾ ಇದ್ದಾಗ ನನ್ನ ಮೊಗವು ಮಿನುಗುವುದು ನೀ ಹತ್ತಿರ ಬಂದಂತೆ ಕಡಲಿಂದ ಉದಯಿಸುವ ಸೂರ್ಯನಂತೆ ಫಳ ಫಳನೆ ಹೊಳೆಯುವುದು ನನ್ನ ಕಂಗಳು ನಾ ಇರುವ ಪ್ರತಿಕ್ಷಣ ಬಯಸುತ್ತಿದೆ ಮನವು ನಿನ್ನ ಸನಿಹ ನನಗೆಂದಿಗೂ ಬರದಿರಲಿ ನಿನ್ನಿಂದ ದೂರಾಗಿ ಇರುವ ವಿರಹ
ನಗುವ ಮೊದಲು ಮನಸಿಗೆ ಖುಷಿ ಇರುವ ಹಾಗೆ ಅಳುವ ಮೊದಲು ಹೃದಯಕ್ಕೆ ನೋವಾಗಿರದೆ ಇರದು ನೋವಾದರೂ ನಲಿವಾದರೂ ಹಂಚಿಕೊಳ್ಳೋ ಮನಸು ಸಿಗದಂತ ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂದಷ್ಟೇ ಪ್ರಾರ್ಥನೆ ಓ ದೇವಾ