Thursday, 28 November 2013

ವಾಸ್ತವ

ಆಕಾಶದ ಎತ್ತರಕ್ಕೆ ಹಾರಾಡುವ 
ಗಾಳಿಪಟ ಸುಂದರವಾಗಿ ಕಾಣುವುದು 
ಆದರೆ ಎತ್ತರಕ್ಕೆ ಹಾರಿಸಿದ ಕೈಗಳು ಮಾತ್ರ 

ಇಳೆಯೊಳಗೆ ಮರೆಯಾಗುವುದು
ಬದುಕು ಸಹ ಹಾಗೆ ಅಲ್ಲವೇ
ಕೈಹಿಡಿದು ಕಾಪಾಡಿದ ಮನವು
ಮೌನದಲ್ಲೇ ಮುಳುಗುವುದು
ಉಪಕಾರ ಮಾಡಿಸಿಕೊಂಡ ಮನವು
ಹಕ್ಕಿಯಂತೆ ಹಾರಾಡುವುದು 

1 comment:

Badarinath Palavalli said...

ಬದುಕಿನ ವೈಪರೀತ್ಯವೇ ಹಾಗೆ ಮೇಡಂ. ಬಳಸಿಕೊಳ್ಳುವವರು ಬಳಸಿಕೊಂಡು ಉದ್ಧಾರವಾದರೂ, ತ್ಯಾಗಿಯ ಬದುಕು ಹಸಿವಿನ ಹೊತ್ತೇ!