Thursday, 29 September 2016

ಬೇರೆಯವರು ಮಾಡಲಾಗದ್ದನ್ನು ನಾನು ಮಾಡಿದೆ 
ಬೇರೆಯವರು ಹೆದರಿ ಹೋಗಲಾಗದ ಜಾಗಕ್ಕೆ ನಾ ಹೋದೆ 
ಏನನ್ನೂ ಕೊಡಲಾರದವರನ್ನು ಏನೋ ಕೇಳಿದೆ 
ಇಷ್ಟವಿಲ್ಲದಿದ್ದರೂ ಶಾಶ್ವತ ಒಂಟಿತನವನ್ನು ಸ್ವೀಕರಿಸಿದೆ 
ಭಯೋತ್ಪಾದಕನ ಮುಖವನ್ನು ನೋಡಿದೆ
ಭಯದ ಭಾವವನ್ನು ಕೊಂದೆ 
ಭಾರತಾಂಬೆಯ ಮಮತೆಯ ಅನುಭವಿಸಿದೆ 
ಯುದ್ಧದಲ್ಲಿ ಕಣ್ಣೀರಿಟ್ಟೆ,ನೊಂದು ಬೆಂದೆ, 
ಭರವಸೆಯ ಮೆಟ್ಟಿಲು ಹತ್ತಲು ಛಲಬಿಡದೆ ಹೋರಾಡಿದೆ 
ನಾ ಸತ್ತರೂ ಬದುಕಿದರೂ ನಾ ಹೇಳಬಯಸುವುದೊಂದೇ 
ನಾನೊಬ್ಬ ಸೈನಿಕ ಉಸಿರಿರುವ ತನಕ ಈ ನಾಡಿನ ರಕ್ಷಕ 

Wednesday, 28 September 2016

ದಿನಕರನ ನೋಡದ ಗಗನ 
ಪಲ್ಲವಿಯಿಲ್ಲದೇ ಬರೆದ ಚರಣ 
ಮೀಟುವ ಕೈಯಿಲ್ಲದ ವೀಣಾ 
ಹೇಗೆ ಎಲ್ಲ ವ್ಯರ್ಥವೋ 
ಹಾಗೆ ಕವನ ಬರೆಯದ ಈ ಚಂದನ 

Tuesday, 20 September 2016

ನೆನ್ನೆ ಕವಿತೆ ಬರೆಯಲಿಲ್ಲವೆಂದೇಕೆ ಮುನಿಸಿಕೊಳ್ಳುವೆ ಹುಡುಗ 
ನೀನಾದರೂ ನನ್ನ ಪ್ರೇಮದ ರೂಪವ ಚಿತ್ರಿಸಬಹುದಿತ್ತಲ್ಲ 
ನನ್ನ ಕಲ್ಪನೆಯ ಕವನಕ್ಕಿಂತಲೂ ಚಂದ 
ನೀ ಬಿಡಿಸುವ ನನ್ನ ಮನಸಿನ  ಚಿತ್ರದ ಅಂದ 
ನಾ ಕವನ ಬರೆಯುವುದ ಬಿಟ್ಟರೂ ಚಿಂತೆಯಿಲ್ಲ 
ನೀ ಬಿಡಿಸುವ ಚಿತ್ರವ ಕಾಣದಿದ್ದರೆ ಬಾಡುವುದು ನನ್ನ ಬದುಕೆಲ್ಲ 


Saturday, 17 September 2016

ಪರಿಶುದ್ಧ ಪ್ರೇಮ ನೆರಳಿನಂತೆ 
ಮುಟ್ಟಲೂ ಆಗದು ಬಿಡಲೂ ಆಗದು 
ಅದರ ಹಿಂದೆ ಓಡಿದರೆ ಬಿಟ್ಟು ಹೋಗುವುದು 
ತಿರುಗಿ ನಡೆದರೆ ಹಿಂದೆ ಬರುವುದು 
ಜೊತೆಗೆ ಎಂದೂ ತೀರದ ಸಿಹಿಯಾದ ಭಾವನೆಯನ್ನು 
ಹೃದಯಕ್ಕೆ ಉಣಿಸುತ್ತಲೇ ಇರುವುದು 

Thursday, 15 September 2016

ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿ 
ಶಾಂತಿಯನ್ನು ಶಾಂತಿಯಿಂದ ಶಾಂತವಾಗಿಸಿ 
ದ್ವೇಷವನ್ನು ದ್ವೇಷದಿಂದ ದ್ವೇಷಿಸಿ
ಪ್ರೀತಿಯಿಂದ ದ್ವೇಷವನ್ನು ಕೊಲ್ಲಿಸಿ
ಜೀವನದ ಮೌಲ್ಯಗಳನ್ನು ಎಲ್ಲರಿಗೂ ನೆನಪಿಸಿ ನಿರೂಪಿಸಿ 

Friday, 2 September 2016

ಕನಸುಗಳ ಕಲ್ಪನ ಭಾವನೆಗಳ ಬಂಧನ 
ಏಳು ಬೀಳಿನ ಚಲನವಲನ 
ಎಲ್ಲವುಗಳ ನಡುವೆ ಒದ್ದಾಡುವುದೇ ಜೀವನ