Monday, 24 September 2012

ಮಿತಿಯೇ ಇಲ್ಲದ ಪ್ರೀತಿ

ನಿನ್ನ ನಗುವನ್ನು ನನ್ನ ಬಾಳ ಬೆಳಕು ಮಾಡಿ
ನಿನ್ನ ಸ್ನೇಹದ ಕಡಲಲ್ಲಿ ಮೈಮರೆತು 
ಈಜಾಡಿ ನನ್ನ ಮನದ ನೋವನ್ನು 

ಮರೆತು ಸಂತಸವಗಿರುವ ಆಸೆ

ನಿನ್ನ ಮನದ ತಿಳಿನೀರ ಸರೋವರದಲ್ಲಿ
ನನ್ನ ಭಾವನೆಗಳ ಪ್ರತಿಬಿಂಬ ಕಂಡು
ಆ ಪ್ರತಿಬಿಂಬಕ್ಕೆ ನೀನು ಬಣ್ಣ ತುಂಬಿ ಅದರ
ರೂಪವನ್ನು ನಾನು ನೋಡುವ ಆಸೆ

ನಿನ್ನ ಕಣ್ಣಿಗೆ ನಾನು ರೆಪ್ಪೆಯಾಗಿ
ನಿನ್ನ ತುಟಿಗಳಿಗೆ ನಾನು ನಗುವಾಗಿ
ನಿನ್ನ ನೋವಿನ ಕಣ್ಣೀರಿಗೆ
ನಾನು ಅನಂದಭಾಷ್ಪವಾಗಿ ಹರಿಯುವ ಆಸೆ

ನಿನ್ನ ಕಣ್ಣಲ್ಲಿ ನಾನು ಕಂಡ ಆ ಪ್ರೀತಿ
ನನ್ನ ಮನಸಿನ ಪ್ರೀತಿಯೊಂದಿಗೆ ಮಿಲನವಾಗಿ
ನಿನ್ನ ಮನದ ಕೊಳದಲ್ಲಿ ನನ್ನ ಮನ ಹರಿದು
ಅದು ಪ್ರೀತಿಯ ಸಾಗರವಾಗಿ ಆ ಪ್ರೀತಿಯ
ಸಾಗರದಲ್ಲಿ ನಾವಿಬ್ಬರೂ ಮಿಂದು ಪ್ರೀತಿಯ
ಸಾರ್ಥಕ ಜೀವನ ಅನುಭವಿಸುವ ಆಸೆ

Thursday, 6 September 2012

ಹೂನಗೆಯ ನೆನಪಲ್ಲಿ

ನೀ ಅಂದು ಚೆಲ್ಲಿದ ಅ ಹೂನಗೆ 
ಇಂದೂ ನನ್ನ ಕಾಡುತಿದೆ
ಸಾಕು ಆ ನಿನ್ನ ಒಂದು ಹೂನಗೆ

ನನ್ನ ಈ ಜೇವನದ ಪಾಲಿಗೆ

ಅದರೂ ಏತಕೆ ಇನ್ನೂ ಕಾಡುತಿದೆ ಆ
ನಿನ್ನ ನಗೆ ಹೇಗೆ ಮರೆಯಲಿ ಆ ಭಾವನೆ
ಮನಸೇಕೋ ಚಡಪಡಿಸುತ್ತಿದೆ ಇಂದು
ಎಲ್ಲಿ ಕಳೆದೋಯ್ತು ಆ ನಗು ಎಂದು

ನಿನ್ನ ಮೊಗದಲ್ಲಿ ಆ ಹೂನಗೆಯ
ಮತ್ತೆ ಕಾಣುವಾಸೆ
ಆ ನಗುಮೊಗವನ್ನು ನೋಡುತ್ತಾ
ನನ್ನ ನೋವನ್ನು ಮರೆಯುವಾಸೆ

ಹೂನಗೆಯ ನೆನಪಲ್ಲೇ ಇರುವೆ ನಾನು
ಆ ನೆನಪಿಂದ ದೂರವಾಗಬೇಡ ನೀನು
ನೀ ಹಾಗೆ ದೂರವಾದರೆ ಲತೆಯಿಂದ
ದೂರಾದ ಸುಮದಂತೆ ನಾನಾಗುವೆ

ನನ್ನ ಆಸೆಯ ಭಾವ ಅರ್ಥೈಸಿಕೊಂಡರೆ ನೀನು
ಬೇರೆ ಏನನ್ನು ಬಯಸಲಾರೆನು ನಾನು
ನನಗಿರುವ ಆಸೆ ಒಂದು
ಆ ಹೂನಗೆ ಇರಲಿ ನಿನ್ನ ಮೊಗದಲ್ಲಿ ಎಂದೆಂದೂ

Monday, 3 September 2012

ಸವಿಬಂಧ

ಸಮುದ್ರಲ್ಲಿರುವ ಇರುವ ನೀರನ್ನು
ಕೊಡದಲ್ಲಿ ತುಂಬಲಾಗದು 
ಮನಸ್ಸಿನ ತುಂಬಾ ಇರುವ ಮಾತನ್ನು

ಹಾಳೆಯಲ್ಲಿ ಬರೆಯಲಾಗದು

ಹೃದಯದ ತುಂಬಾ ಇರುವ ಪ್ರೀತಿಯನ್ನು
ಕಣ್ಣಿನಲ್ಲಿ ವ್ಯಕ್ತವಾಗುವುದು ಆದರೆ
ಬಾಯಲ್ಲಿ ಹೇಳಲಾಗದು

ತಾಯಿಯ ಕರುಳಲ್ಲಿ ಬೆರೆತ ಮಮತೆಯನ್ನು
ಅನುಭವಿಸಿದವರಿಗೆ ಗೊತ್ತಾಗುವುದೇ
ಹೊರತು ಕಣ್ಣಿಂದ ನೋಡಿದರೆ ತಿಳಿಯದು

ದೈಹಿಕವಾಗಿ ನೋವಾದರೂ ಮನಸ್ಸಿಗೆ
ನೋವಾದರೂ ಬರುವುದು ನೀರು ಕಣ್ಣಲ್ಲಿ
ಮನಸ್ಸಿಗೆ ಖುಷಿಯಾದರೂ ಸುರಿಯುವುದು
ಆನಂದ ಭಾಷ್ಪ ಕಣ್ಣಲ್ಲಿ

ಕಣ್ಣು ಕರಳು ಮನಸು ಈ
ಮೂವರ ನಡುವೆ ಇರುವ ಅನುಬಂಧ
ಸಾಗರ ಹುಣ್ಣಿಮೆಗಳ ನಡುವೆ ಬೆಸೆದ
ಹಾಗೇ ಇರುವ ಸವಿಯಾದ ಬಂಧನ