Thursday, 25 July 2019

ಬುದ್ಧಿಮಾತು

ಹೆತ್ತವರನ್ನು ನರಳಿಸುವ ಗಂಡುಮಕ್ಕಳು
ಗಂಡನ ಹೆತ್ತವರನ್ನು ನರಳಿಸುವ ಹೆಣ್ಣುಮಕ್ಕಳು ಎಂದಿಗೂ ಉದ್ಧಾರವಾಗುವುದಿಲ್ಲ.
ನಿಮಗೆ ವಯಸ್ಸಾಗುವುದು ಎಷ್ಟು ಸತ್ಯವೋ
ನಿಮ್ಮ ಮಕ್ಕಳ ಆರೈಕೆಯಲ್ಲಿ ನೀವು ಭವಿಷ್ಯದಲ್ಲಿ ಬಾಳಬೇಕು ಎಂಬುದು ಅಷ್ಟೇ ಸತ್ಯ.
ನಿಮ್ಮವರನ್ನು ನಿಸ್ವಾರ್ಥದಿಂದ ಪ್ರೀತಿಸಿ ಆರೈಕೆ ಮಾಡಿದರೆ ದುಪ್ಪಟ್ಟು ಪ್ರೀತಿ ದಕ್ಕುವುದು ನಿಮ್ಮ ಮುಪ್ಪಿನ ಕಾಲದಲ್ಲಿ.
ಏಕೆಂದರೆ ಹೆತ್ತವರ ಶಾಪ ಗಲ್ಲುಶಿಕ್ಷೆಗಿಂತ ಘೋರವಾದದ್ದು. 😢
ವಿ.ಸೂ.: ಎಲ್ಲ ಇದ್ದೂ ಯಾರೂ ಇಲ್ಲದವರಂತೆ ವೃದ್ಧಾಶ್ರಮದಲ್ಲಿ ಬದುಕುತ್ತಿರುವ ಹಿರಿಯರನ್ನು ಕಂಡು ಮನ ನೊಂದು ಬರೆದಿದ್ದು.
😢 😢 😢

ಅವರವರ ಭಾವಕ್ಕೆ

ಪ್ರೀತಿಯನ್ನು ದೇವರೆಂದು ಪೂಜಿಸುವರು ಹಲವರು
ಪ್ರೀತಿಯ ಹೆಸರಲ್ಲಿ ಮೋಸ ಮಾಡುವರು ಕೆಲವರು
ಈ ಹಲವರು ಕೆಲವರು ನಡುವೆ ಹೃದಯದಲ್ಲೇ ಬಚ್ಚಿಟ್ಟ ಪ್ರೀತಿಯೊಂದಿಗೆ 
ಜೀವನ ಪೂರ್ತಿ ಸಾರ್ಥಕವಾಗಿ ಬಾಳುವರು ಮತ್ತೊಂದು ಬಗೆಯ ಜನರು
ಪ್ರೀತಿಗೆ ಬೇಕಿಲ್ಲ ದೈಹಿಕ ಸನಿಹ
ಅದು ಬಯಸುವುದು ಮನಸಿನ ಮಿಲನ