ತನ್ನದಲ್ಲದ ವಸ್ತುವ ಪ್ರೀತಿಸುವುದು ತಪ್ಪಲ್ಲ ಅದೇ ವಸ್ತು ತನಗೇ ದಕ್ಕಲಿ ಎಂಬ ಸ್ವಾರ್ಥ ತಪ್ಪು ಅದಕೆ ಕಾರಣ ಹಿರಿಯರ ಚಿನ್ನದ ನುಡಿ ಬಾರದು ಬಪ್ಪದು ಬಪ್ಪದು ತಪ್ಪದು
Saturday, 17 January 2015
ನಾ ನಿನ್ನ ಪ್ರೀತಿಸುವ ಪ್ರಮಾಣ ಎಷ್ಟೆಂದು ಅರಿತಿಲ್ಲ ನನ್ನ ಮನ ಆದರೆ ನೀನಿಲ್ಲದೆ ಹೋದರೆ ಒಂದು ಕ್ಷಣವೂ ನಿಲ್ಲದು ನನ್ನ ಪ್ರಾಣ ನೀ ಎಲ್ಲೇ ಹೇಗೆ ಇದ್ದರೂ ಚಿಂತೆ ಇಲ್ಲ ಎನಗೆ ನಿನ್ನ ಮನಸಿನ ಮೂಲೆಯಲ್ಲೊಂದು ಜಾಗ ಕೊಡು ಅದೇ ಸಾಕೆನಗೆ
Thursday, 1 January 2015
ಹೊಸವರ್ಷದ ಹೊಂಗಿರಣ ಬಿದ್ದಾಗಿದೆ ದೇವಸ್ಥಾನವೆಂಬ ಪವಿತ್ರ ಜಾಗದಿಂದ ದಿನ ಆರಂಭವಾಗಿದೆ ದೇವರ ಆಶೀರ್ವಾದ ಪಡೆದಂತ ಅನುಭವ ಮನಸಲ್ಲಿ ಹೊಸ ಆಸೆಯ ಚಿಗುರು ಕವಲೊಡೆದಿದೆ ಬಾಳ ಲತೆಯಲ್ಲಿ ಶುದ್ಧ ಮನಸಿಂದ ಪ್ರಾರ್ಥಿಸುವೆ ಆ ದೇವರನ್ನು ಸುಖ ನೆಮ್ಮದಿಯಿಂದ ಬಾಳಿಸು ನೀ ಎಲ್ಲರನ್ನು