ಪುಸ್ತಕಗಳ ಭಾವಗಳೊಂದಿಗೆ ನನ್ನ ಕವನಗಳ ಯಾನ
ನನ್ನ ಕವನ
ನಾ ಓದಿದ ಪುಸ್ತಕ
ನನ್ನ ಲೇಖನ
ನನ್ನ ಕವನ
ನಾ ಓದಿದ ಪುಸ್ತಕ
ನನ್ನ ಲೇಖನ
Wednesday, 13 August 2014
ಮನಸಾರೆ ಮನಸಿಂದ ಮನದಾಳದಲಿರುವ ಮನಸನು
ಮನಸಿಗಾಗಿ ಮರೆತು ಹೋಯ್ತು ಪ್ರೀತಿ
ಅಂದು ಹೋದ ಆ ಮನಸು ಮತ್ತೆ ಸಿಗುವುದೋ
ಇಲ್ಲವೋ ಎಂದು ಕಾಡುತಿದೆ ಭೀತಿ
ಬಾಳಿನ ಜ್ಯೋತಿಯು ನೀನಾಗಿ ಬಂದಾಗ
ನನ್ನೆದೆಯಲ್ಲಿ ಒಲವಿನ ಚಿಲುಮೆಯು ಉಕ್ಕಿ ಹರಿಯುತಿದೆ
ನೀ ಬಂದ ಘಳಿಗೆ ನನ್ನ ಮೊಗದಲ್ಲಿ ಬರಿ ನಗುವೇ
ನೀ ಬಳಿಯಿದ್ದ ಸಮಯವೆಲ್ಲ ಸಂತಸದ ಹೊನಲೇ
ಪ್ರತೀ ಕ್ಷಣ ನನ್ನ ಉಸಿರು ಹೇಳುವುದೊಂದೇ ನಾ ಹೇಗಿದ್ದರೂ
ಎಲ್ಲಿದ್ದರೂ ನಿನಗಾಗಿ ಬಾಳಬೇಕು ನಿನ್ನ ಮುದ್ದಿನ ಮನದನ್ನೆಯಾಗಿ
Wednesday, 6 August 2014
ಬಿತ್ತುವ ಆಸೆಯಾಗಿದೆ ಪ್ರೀತಿಯ ಸಸಿಯ
ನನ್ನ ಹೃದಯದ ಇಳೆಯಲ್ಲಿ
ಹೇಗೆ ಬರಿಸಲಿ ಆ ಸಸಿಯ ಬೆಳೆಸುವ
ಒಲವಿನ ಮಳೆಯ
ನನ್ನ ಪ್ರೀತಿ ತುಂಬಿದ ಕಣ್ಣಿನ ಹನಿಗಳು
ಆಗಿವೆ ಇಂದು ಕಾರ್ಮೋಡ
ಅದು ಕರಗಿ ಮಳೆ ಸುರಿಸುವರಿಗೂ
ದೂರಾಗದು ನನ್ನ ಮನದ ದುಗುಡ
ಬೇಗನೇ ಸುರಿ ನೀ ಸ್ವಾತಿಮುತ್ತಿನ
ಹನಿಯಾಗಿ ಹೃದಯದ ಇಳೆಗೆ
ಶಾಶ್ವತವಾಗಿ ಬೇರೂರಲು
ನನ್ನ ಪ್ರೀತಿಯ ಸಸಿಗೆ
Newer Posts
Older Posts
Home
Subscribe to:
Posts (Atom)