Thursday, 28 March 2013

ಹಾರಾಡುವ ಹಕ್ಕಿಯಂತೆ ನಾನಿದ್ದೆ 
ಬೆಳ್ಳಿ ಮೋಡದಂತೆ ತೇಲುತಿದ್ದೆ 
ಪ್ರೀತಿ ಪ್ರೇಮದ ಬಂಧನಕ್ಕೆ ಸಿಲುಕದೆ 
ಸ್ವಚ್ಚಂದವಾಗಿ ಸಂಚರಿಸುತ್ತಿದ್ದೆ 
ಏನು ಮೋಡಿ ಮಾಡಿದೆಯೋ ನೀನು 
ನಿನ್ನ ಒಲವಿನ ಬಲೆಯಲ್ಲಿ ಬಂಧಿಯಾದೆ ನಾನು 
ನನ್ನ ಜೀವ ಮತ್ತು  ಜೀವನದ  ಪ್ರತಿಕ್ಷಣಕ್ಕೂ 
ಉಸಿರಾಗುತ್ತಾ ಮೈಮನಗಳ ಆವರಿಸಿದೆ ನೀನು 

 

ನಿನ್ನ ನಗು


ನೀ ನಕ್ಕಾಗ ಆ ಸುಂದರ ಮೊಗವ 
ನೋಡಲು ಸಾಲದೆನಗೆ ಎರಡು ಕಂಗಳು  
ನೀ ಸುಳಿದಾಗ ಆ ಚಂದದ ಪುಳಕವ 
ವರ್ಣಿಸಲು ಅಸಾಧ್ಯ ನನಗೆ 

ನೀ ಸ್ಪರ್ಶಿಸಿದರೆ ನನ್ನ ಆಗುವುದು 
ರೋಮಾಂಚನ ನನ್ನ ಮೈ ಮನ   
ನಿನ್ನ ಅಂದದ ಮೊಗದ ಚಂದದ ನಗುವಿಗೆ 
ಸೋತುಹೋಗಿದೆ ನನ್ನ ಮನ 

ನೀ ನನ್ನ ಬಳಿಯಿದ್ದರೆ 
ಹಗಲಲಿ ಶಶಿಯ ಬೆಳದಿಂಗಳ ಕಾಣುವೆ 
ಇರುಳಲಿ ರವಿಯ ಬೆಳಕ ಕಾಣುವೆ 
ಪ್ರತಿಕ್ಷಣವೂ ಮಂದಹಾಸ ಬೀರುವೆ 

Wednesday, 27 March 2013

ನೆನಪಿನಿಂದ ಮುಕ್ತಿ


ಮರೆಯಬೇಕೆಂದಿರುವೆ ನಿನ್ನ ನೆನಪನು 
ಬೇಡವೆಂದರೂ  ಹರಿದು ಬರುತಿದೆ ಆ  ನೆನಪಿನ ಅಲೆಗಳು 

ನಾ ಅಂದು ತಿಳಿದಿದ್ದೆ ನೀನು ಸವಿನೆನಪಿನ ಕಡಲೆಂದು 
ಆದರೆ ಇಂದು ಗೊತ್ತಯಿತು ನೀನು ಕಹಿನೆನಪಿನ ಸುಳಿಯೆಂದು 

ಸುಳಿಯಲಿ ಸಿಕ್ಕಿ ಒದ್ದಾಡಿ ಸಾಕಾಗಿದೆ ನನಗೆ 
ಖುಷಿಯ ಕಡಲಲ್ಲಿ ಈಜಬೇಕೆಂದು ಅನಿಸುವುದಿಲ್ಲವೇ ನಿನಗೆ 

ದಿನದಿಂದ ದಿನಕ್ಕೆ ಕೊರಗುತ್ತಲೇ ಕರಗುತಿದೆ  ನನ್ನ ಶಕ್ತಿ 
ಬೇಕೆನಗೆ ನಿನ್ನ ನೆನಪೆಂಬ ಹಿಂಸೆಯಿಂದ ಮುಕ್ತಿ 

Tuesday, 26 March 2013

ನನಗಾಗಿ ನಾ ಏನು ಬೇಡೆನು 
ನಿನಗೆ ಓ ದೇವರೇ 
ಸಾಕಾಗಿ ಹೋಗಿದೆ ನೀ 
ಕೊಡುತಿರೋ ಉಡುಗೊರೆ 
ಬೇಗನೆ ತೆರೆದು ಬಿಡು ಈ 
ಜೀವನವೆಂಬ ನಾಟಕದ ತೆರೆ 
ಕೊಟ್ಟುಬಿಡು ನನಗೆ ನಿನ್ನ 
ಪ್ರೀತಿಯೆಂಬ ಸೆರೆ

Saturday, 23 March 2013

ನನ್ನ ನಿನ್ನ ನಡುವಿನ ಅಂತರ


ಕೈ ಹಿಡಿದು ನಡೆಸಿದೆ ನಿನ್ನ ಜೊತೆಯಲಿ 
ನಗುವೆಂಬ ಹೂವ ನೀ ಇಟ್ಟೆ ನನ್ನ ಮುಡಿಯಲಿ 
ಕಮರಿದ ಮೊಗಕೆ  ಬಂದಿತು ಅಂದ 
ನೀ  ನನಗೆ ಮುಡಿಸಿದ ಆ ಹೂವಿಂದ 
   
ಭೂಮಿಯ ನೀರು ಅವಿಯಾದಾಗಲೇ 
ಬಾನಲಿ ಆಗುವುದು ಮೋಡ 
ಬಾನಲಿರುವ ಮೋಡ ಕರಗಿದರೆ 
ಸುರಿಯುವುದು ಮಳೆ ಧರೆಗೆ 

ಬಾನು ಭೂಮಿಯ ಬಂಧ ಬಿಡಿಸಲಾಗದ ಸವಿಬಂಧ 
ಲೆಕ್ಕವಿಲ್ಲ ಅವುಗಳಿಗೆ ಮದ್ಯದಲ್ಲಿರುವ ಅಂತರ 
ಹಾಗೆ ನಾನು ನೀನು ಬೇರೆಯಾಗಿ ಬದುಕಿದರೂ 
ಮನಸೆರಡೂ ಬೆರೆತು ಬಾಳುತಿವೆ ಹತ್ತಿರ 

ಕಣ್ಣೀರ ಕೋಡಿಯಲಿ ಕೊಚ್ಚಿ ಹೋಗುತಿದ್ದೆ ನಾನು 
ಪ್ರೀತಿಯ ಪನ್ನೀರಲಿ ತೇಲುವಂತೆ ಮಾಡಿದೆ ನೀನು 
ಹೇಗೆ ಕೊಂಡಾಡಲಿ ನಿನ್ನ ಉಪಕಾರವ 
ಏನೆಂದು ಬಣ್ಣಿಸಲಿ ನೀ ಸುರಿಸಿದ ಒಲವ  


Friday, 22 March 2013

ಚಂಚಲತೆ


ಏನಾಗಿದೆಯೋ ಈ ಮನಸಿಗೆ ನಾ ಅರಿಯೆ 
ಆಗದಿರುವುದನ್ನೇ ಸದಾ ಪರಿತಪಿಸುತಿದೆ 

ಇರುವ ಭಾಗ್ಯವ ಒಪ್ಪದೇ ಬರದಿರುವ 
ಅದೃಷ್ಟವ ನೆನೆದರೆ ಸಿಗುವುದೇ ನೆಮ್ಮದಿ 
ಕಟ್ಟಲಾಗುವುದೇ  ಈ ಬದುಕಿಗೆ ಬುನಾದಿ 

ಓ ಹುಚ್ಹು ಮನವೇ ಓಡಬೇಡ ಯಾರ ಹಿಂದೆ 
ಬರುವುದನ್ನು ಸ್ವೀಕರಿಸು ನಿನ್ನ ಮುಂದೆ 

ಇದ್ದರೆ ನಿನಗೆ ನಿನ್ನ ಮೇಲೆ ಹಿಡಿತ 
ಹಾಕಲಾಗದು ಯಾರಿಗೂ ನಿನ್ನ ಮೇಲೆ ತುಡಿತ 

ಜೀವನದ ಅರ್ಥ ಅರಿತರೆ ಬಾಳುವೆ ನೀ ಹಾಯಾಗಿ 
ಚಂಚಲವಾದರೆ ಹೋಗುವೆ ನೀ ಹಾಳಾಗಿ 

ನೋವು

ಪ್ರತಿ ಕ್ಷಣ ನೋವಲ್ಲೇ ಬೇಯುತಿರುವೆ 
ಏನು ತಪ್ಪು ಮಾಡಿರುವೆನೋ ಗೊತ್ತಿಲ್ಲ 

ಆದರೂ ಕಾಡುತಿದೆ  ಚಿಂತೆ ಒಂದು 
ನಾ ಮಾಡಿದ ಪಾಪವಾದರೂ ಏನೆಂದು 

ತಾಳಲಾಗುತ್ತಿಲ್ಲ ನನಗೆ ಈ ನೋವು 
ಬೇಗನೆ ಬರಬಾರದೇ ನನಗೆ ಆ ಸಾವು 

ಎಷ್ಟು ಯೋಚಿಸಿದರೂ ಸಿಗುತ್ತಿಲ್ಲ ನನಗೆ ಉತ್ತರ 
ಅದಕೆಂದೇ ಬಯಸುತ್ತಿರುವೆ ನನ್ನ ಸಾವು ಬರಲಿ ಹತ್ತಿರ