Tuesday, 10 July 2012

ಸುಖದುಖದ ನಡುವೆ....

ಮೌನಗೀತೆಯಲ್ಲಿ ಬರೆಯಲು 
ಸಾಧ್ಯವೇ ಮನದ ಮಾತನ್ನು
ಕಣ್ಣಿನ ಹನಿಯಲ್ಲಿ ಹೊರಹಾಕಲು 
ಸಾಧ್ಯವೇ ಹೃದಯದ ನೋವನ್ನು 

ನಿಸರ್ಗದ ಸೌಂದರ್ಯಕ್ಕೆ ಹೋಲಿಸಲು
ಸಾಧ್ಯವೇ ಮನುಜರ ಸೃಷ್ಟಿಯನ್ನು
ಜನನಿಯ ಮಮತೆಗೆ ಸರಿಸಾಟಿಯೇ
ಮಕ್ಕಳು ಕೊಡುವ ಆಸರೆ

ಮುಗಿಲ ಮಲ್ಲಿಗೆಯ ಕಂಡು
ಆಸೆಪಟ್ಟರೆ ಅದು ನಿಲುಕುವುದೇ
ಭೂಮಿಯ ಮೇಲೆ ನಿಂತ ಕೈಗಳಿಗೆ
ಓ ಮನುಜ ನೀನೆಷ್ಟು ಕ್ಷುಲ್ಲಕ ಅಲ್ಲವೇ
ಈ ಪ್ರಕೃತಿಯ ಮುಂದೆ...???

ಓ ನನ್ನ ಜೀವನವೇ
ಎಂದಿಗೆ ದಡ ಸೇರುವೆ ನೀನು
ಸಾಕಲ್ಲವೇ ಈ ಪರದಾಟ
ಎಂದಿಗೆ ಮುಗಿಸುವೆ ನಿನ್ನ ಆಟ..????????

Thursday, 5 July 2012

ಆನಂದ

ಕಲ್ಪನೆಯ ಕನಸಲ್ಲಿ 
ಜೀವನದ ಮನಸು ಬೆರೆತರೆ 
ಎಂತಹ ಆನಂದ 

ಪ್ರಕೃತಿಯ ಮಡಿಲಲ್ಲಿ
ಸಿಡಿಲಿನ ಅರ್ಭಟ ಅಡಗಿದರೆ
ಎಂತಹ ಆನಂದ

ಹಾಲಿನ ಹೊಳೆಯಲ್ಲಿ
ಜೇನಿನ ಮಳೆ ಸುರಿದರೆ
ಎಂತಹ ಆನಂದ

ಈ ಅರಿತು ಬೆರೆತು ಬಾಳುವ
ಸಂಬಂಧ ನಮ್ಮದಾದರೆ
ಆಹಾ ಎಂತಹ ಆನಂದ....!!!!!!!!!!

Saturday, 30 June 2012

ಆಳವಾದ ಪ್ರೀತಿ

ಕಡಲಿನ ಭಯಾನಕ ಅಲೆಗಳು 
ಉಕ್ಕಿ ಬಳಿ ಬಂದರೂ 

ಆಗಸದ ಮೋಡಗಳ ರೌದ್ರ ನರ್ತನದಿಂದ 
ಸಿಡಿಲು ನನ್ನ ತಲೆ ಮೇಲೆ ಬಡಿದರೂ 

ಬಿರುಗಾಳಿ ಬೀಸಿ ಎದಿರಾದರೂ
ಕಂಪನಗೊಂಡು ಭೂಮಿ ಬಿರಿದರೂ

ನಿನ್ನ ಒಲವ ಸವಿನೆನಪಲ್ಲಿ
ನಿನ್ನೊಲುಮೆಯ ಲತೆಯಲ್ಲಿ

ನಾನು ಹೂವಾಗಿ
ಪ್ರೀತಿಯ ತೇರನ್ನು ಹತ್ತಲು

ಪ್ರತಿ ಜನ್ಮ ಕಾಯುವೆ ಎಂದು ಹೇಳಿ
ಕಣ್ಣು ಮುಚ್ಚುವೆ.....
 

ಗೆಳೆಯನ ಹುಡುಕಾಟ

ಓ ನನ್ನ ಗೆಳೆಯನೇ ಎಲ್ಲಿರುವೆ ನೀನು 

ಇನ್ನು ಎಷ್ಟು ಕಾಯಲಿ ನಿನಗಾಗಿ ನಾನು 

ನೀ ನನ್ನ ಬಳಿ ಇದ್ದರೆ


ನನಗಿಲ್ಲ ಯಾವುದೇ ತೊಂದರೆ 

ಸಾಗರದಲೀ ನಾ ಮುಳುಗಿದರೂ 

ಪ್ರಳಯದಲೀ ನಾ ಸಿಲುಕಿದರೂ 

ನಾ ಬಯಸುವುದು ನಿನ್ನ ಸನಿಹ 

ಮಾತ್ರ ಗೆಳೆಯನೇ....

ಸ್ನೇಹ


ಸ್ನೇಹದ ಕಡಲು ಎಂಬುದು ಅಪಾರ 

ಅದರಲ್ಲಿ ಈಜಿ ಬಂದವನೇ ಸರದಾರ 

ಓ ನನ್ನ ಗೆಳೆಯ/ಗೆಳತಿಯರೇ ನಾವೆಲ್ಲರೂ 

ಜೊತೆಗೆ ಈ ಕಡಲಲ್ಲಿ ಈಜಿ 

ಇಳಿಸೋನ ನಮ್ಮ ಮನಸಿನ ಭಾರ 

ಅನುಬಂಧದ ಆನಂದ

ಕಲ್ಪನೆಯ ಕನಸಲ್ಲಿ 
ಜೀವನದ ಮನಸು ಬೆರೆತರೆ 
ಎಂತಹ ಆನಂದ 

ಪ್ರಕೃತಿಯ ಮಡಿಲಲ್ಲಿ
ಸಿಡಿಲಿನ ಅರ್ಭಟ ಅಡಗಿದರೆ
ಎಂತಹ ಆನಂದ

ಹಾಲಿನ ಹೊಳೆಯಲ್ಲಿ
ಜೇನಿನ ಮಳೆ ಸುರಿದರೆ
ಎಂತಹ ಆನಂದ

ಈ ಅರಿತು ಬೆರೆತು ಬಾಳುವ
ಸಂಬಂಧ ನಮ್ಮದಾದರೆ
ಆಹಾ ಎಂತಹ ಆನಂದ....!!!!!!!!!!


ಸ್ಪೂರ್ತಿ

ಅರಳುವ ಹೂವಲ್ಲಿ ನಾ ಕಂಡೆ 
ಒಂದು ನಗುವನ್ನು 
ಆ ನಗುವಿಗೆ ಸ್ಪೂರ್ತಿ ಆ ಗಿಡವು 

ಸುಂದರವಾದ ಹಸಿರು ಹೊಲದಲ್ಲಿ 
ನಾ ಕಂಡೆ ತುಂಬಿ ಬಂದ ಫಸಲು
ಆ ಫಲಕ್ಕೆ ಸ್ಪೂರ್ತಿ ಈ ಭೂಮಿ

ನೀಲಿ ಆಕಾಶದಲ್ಲಿ ನಾ ಕಂಡೆ
ಮಿರಿ ಮಿರಿ ಮಿನುಗುವ ಬೆಳ್ಳಿಮೋಡ
ಆ ಮೋಡಕ್ಕೆ ಸ್ಪೂರ್ತಿ ಆ ನೀಲಿ ಬಾನು

ಫಳ ಫಳ ಹೊಳೆಯುವ ಅಮ್ಮನ ಕಣ್ಣಲ್ಲಿ
ನಾ ಕಂಡೆ ಎಂದೂ ಕಾಣದ ಪ್ರೀತಿ
ಆ ಪ್ರೀತಿಗೆ ಸ್ಪೂರ್ತಿ ಆ ತಾಯಿಯ ಮಮಕಾರ

ಆ ದೇವರ ಸೃಷ್ಟಿಯಲ್ಲಿ ನಾ ಕಂಡೆ
ಈ ಎಲ್ಲ ಪ್ರಕೃತಿಯ ಕೊಡುಗೆ
ಆದರೆ ನನಗೆ ತಿಳಿಯಲಿಲ್ಲ ಯಾರೂ ಇದೆಕೆಲ್ಲ ಸ್ಪೂರ್ತಿ....????