ಭಾವನೆಗಳ ಬರ ಬರುವ ಬದಲು ಕವಿತೆಗಳ ಕಲ್ಪನೆ ಕರಗುವ ಮೊದಲು ಗೀಚುವ ಗೋಳು ಗೊಣಗುವ ಮುನ್ನ ರಚಿಸಬೇಕಿದೆ ನವರಸ ತುಂಬಿದ ಕವನವನ್ನ ಯಾರು ಕೇಳುವರೋ ಏನು ತೋಚದೇ ಕಂಗಾಲಾಗಿರುವ ನನ್ನ ಪರಿತಪಿಸುವ ಪರಿಯನ್ನ
ಬರೆದು ಬರೆದು ಸಾಕಾದ ಮನಸು ಬೇಯುತಿದೆ ಬೇಸಿಗೆಯಲಿ ಒಂದೋ ಎರಡೋ ಭಾವನೆಗಳು ಮೂಡಿದರೆ ಸಾಕು ಸ್ವಚ್ಛಂದವಾಗಿ ಹರಿಯುವುವು ಪದಗಳು ತಾಳೆಗರಿಯಲಿ ನಾ ಬರೆಯಲಾರೆ ಏನನ್ನೂ ನನಗಾಗಿ ಬಯಸದೇ ಬಂದ ಭಾವನೆಗಳು ಬರೆಸುತಿವೆ ಕವನಗಳ ಸೇರಿಸಿ ಎಲ್ಲ ಸಾಲುಗಳನು ಒಂದಾಗಿ ಮೂಡುವುವು ಆಸೆಗಳು ನೂರಾರು ಹುಡುಕುವೆನು ಬರೆಯಲು ಪದಗಳ ಸಾವಿರಾರು ಆಸೆಯೆಂಬ ಆನೆಯ ಏರಲು ಬೇಕಿದೆ ಪದಗಳ ಏಣಿ ಸಾಗುವುದು ಆಗ ಸುಂದರ ಕಾವ್ಯದ ದೋಣಿ