ಕಲ್ಪನೆಯ ಕನಸಿಗೆ ಕೊನೆ ಇಲ್ಲ ವಾಸ್ತವ ಬದುಕಲ್ಲಿ ಖುಷಿ ಇಲ್ಲ ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ
Wednesday, 10 December 2014
ಭಾರವಾದ ಮನಸಿಗೆ ಮಂಜಿನಂತೆ ಕರಗಿಸುವ ಸಾಂತ್ವನ ಸಿಕ್ಕಿದರೆ ಸ್ವರ್ಗ ಸಿಕ್ಕಷ್ಟು ಆನಂದ ನಲಿಯುವ ಮನಸಿಗೆ ದುಃಖದ ಮನಸು ಸಿಕ್ಕರೆ ದೊರಕಿದಂತೆ ಖುಷಿಯ ಹಂಚುವ ಅವಕಾಶ ನೋವು ನಲಿವೆಲ್ಲ ಸಾಮಾನ್ಯ ಬದುಕಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ ತಲೆಯಲ್ಲಿ
Sunday, 7 December 2014
ಅಪರೂಪದ ಅನುರಾಗದ ಆಲಿಂಗನ ಮನಸಿಂದ ಮನಸಿಗೆ ಮುದ್ದಾದ ಮಿಲನ ಮನದಲ್ಲಿ ಅಂದದ ಪ್ರೀತಿಯ ಅನನ್ಯ ಆರಾಧನ ಕಣ್ಣಲ್ಲೇ ಕಾಣುತಿದೆ ಒಲವಿನ ಸಂಚಲನ
Wednesday, 3 December 2014
ನೀಲಿ ಕಡಲಾಚೆ ನೀಲಿ ಆಗಸವೇ ಕಂಡರೂ ಮುಟ್ಟಲಾಗುವುದೇ ನೀಲಿ ಬಣ್ಣವ ಸಾಲು ಮರಗಳೆಲ್ಲ ಹಸಿರಾಗಿ ಕಂಡರೂ ನಡುವೆ ಬೆಳೆದ ಜಾಲಿ ಮುಳ್ಳು ಚುಚ್ಚದಿರುವುದೇ ಕಾಮನಬಿಲ್ಲಿನ ಏಳು ಬಣ್ಣಗಳು ಸುಂದರವಾಗಿದ್ದರೂ ಅವುಗಳ ಸ್ಪರ್ಶ ಸುಖವು ಸಿಗುವುದೇ ಬಣ್ಣಗಳ ಲೋಕ ಕಣ್ಣಿಗೆ ಚಂದ ಕಂಡರೂ ಅವು ಶಾಶ್ವತವಲ್ಲ ಈ ಸತ್ಯ ದರ್ಶನ ಎಂದಾಗುವುದೋ ನಾ ಅರಿತಿಲ್ಲ
Sunday, 30 November 2014
ಮರೆತರೂ ಮರೆಯಲಾಗದ ನೆನಪೊಂದು ಮತ್ತೆ ಮತ್ತೆ ಕಾಡುತಿದೆ ಸೋತರೂ ಸೋತೆನೆಂದು ಒಪ್ಪದೇ ಮತ್ತೆ ಮತ್ತೆ ಗೆಲ್ಲುವಾಸೆ ಆಗುತಿದೆ ಏಕೆ ಈ ಹಠ ತಿಳಿಯದು ತನ್ನದಲ್ಲದ ವಸ್ತುವ ತನ್ನದೇ ಎಂದು ಭಾವಿಸಿ ಇರುವ ವಾಸ್ತವದ ಸತ್ಯವ ಸ್ವೀಕರಿಸದೆ ಏಕೆ ಪರದಾಡುವೇ ಹುಚ್ಚು ಮನವೇ...??
Monday, 24 November 2014
ನೋಡಲು ನೀನು ಚಂದ್ರನಿಗಿಂತ ಚಂದ ನಗಲು ನೀನು ತಾವರೆಗಿಂತ ಅಂದ ನಡೆಯಲು ನೀನು ತಂಗಾಳಿಗಿಂತ ಹಿತ ನುಡಿಯುವ ಮಾತು ಮುತ್ತುಗಳಿಗಿಂತ ಮಿತ ಮಾತಲ್ಲಿ ವರ್ಣಿಸಲು ಅಸಾಧ್ಯ ನಿನ್ನ ಒಲವಿನ ಸುಧೆಯ ನಿನ್ನ ಪ್ರೇಮವೇ ತುಂಬಿದೆ ನನ್ನ ಹೃದಯದ ಧರೆಯ
Saturday, 22 November 2014
ಮೊಗ್ಗಂತಿದ್ದ ಆಸೆಗಳೆಲ್ಲ ಹೂವಾಗಿ ನಗುತಿವೆ ಅವುಗಳ ಪೋಣಿಸಿ ಮಾಲೆ ಮಾಡುವ ಮನಸಾಗಿದೆ ದಾರದ ಹುಡುಕಾಟ ಪ್ರತೀಕ್ಷಣ ಮಾಡುತಿರುವೆ ಅದು ಸಿಗುವುದೆಂದೋ ನಾ ಅರಿಯೇ....