Tuesday, 5 February 2013

ಓಲೆ


ನಾ ಬರೆದಿರುವೆ ನಿನಗಾಗಿ ಒಂದು ಓಲೆ ಅದನ್ನು ಓದಿ ನೋಡು ನೀ ಬಾಲೆ ಅಲ್ಲಿರುವುದು ನನ್ನ ಭಾವನೆಗಳ ಅಲೆನನಗೆ ಗೊತ್ತು ನಿನಗಿದೆ ನನ್ನ ಅರ್ಥಮಾಡಿಕೊಳ್ಳುವ ಕಲೆ ಅದಕ್ಕಾಗಿಯೇ ನೀ ಕಳಿಸು ನನಗೊಂದು ನಿನ್ನ ಮನಸಿನ ಕರೆಯೋಲೆ


ಅಮ್ಮ

ಅಳುವ ಕಂದನ ನೋಡಿದರೆ 
ಮುನಿಯುವಳೇ ಅಮ್ಮ 


ನಗುವ ಹೂವ ನೋಡಿದರೆ 
ಬಾಡುವುದೆ ಬಳ್ಳಿ 


ಸಿಡಿಲಿನ ಆರ್ಭಟಕ್ಕೆ
ಬೆದರುವಳೇ ಭೂತಾಯಿ 


ಕರುವಿನ ಅಂಬಾ ಆರ್ತನಾದಕ್ಕೆ
ಕರಗದಿರುವುದೇ ಹಸುವು 


ಓ ಅಮ್ಮ ನಿನ್ನ ಎಷ್ಟು ಕೊಂಡಾಡಿದರೂ
ಬಣ್ಣಿಸಿದರೂ ಸಾಲದಮ್ಮ....


ನಿನಗಿಂತ ಮಿಗಿಲಾದ ದೇವರ ಕಾಣೆ
ನಿನಗಿದೋ ಕೋಟಿ ನಮನ ಅಮ್ಮ....

ಆನಂದ


ಕಲ್ಪನೆಯ ಕನಸಲ್ಲಿ
ಜೀವನದ ಮನಸು ಬೆರೆತರೆ
ಎಂತಹ ಆನಂದ

ಪ್ರಕೃತಿಯ ಮಡಿಲಲ್ಲಿ
ಸಿಡಿಲಿನ ಅರ್ಭಟ ಅಡಗಿದರೆ
ಎಂತಹ ಆನಂದ

ಹಾಲಿನ ಹೊಳೆಯಲ್ಲಿ
ಜೇನಿನ ಮಳೆ ಸುರಿದರೆ
ಎಂತಹ ಆನಂದ

ಈ ಅರಿತು ಬೆರೆತು ಬಾಳುವ
ಸಂಬಂಧ ನಮ್ಮದಾದರೆ
ಆಹಾ ಎಂತಹ ಆನಂದ....!!!!!!!!!!

ಬದುಕಿನ ಮಾಯೆ

ಕಣ್ಣಿನ ನೋಟಕ್ಕೂ ಹೃದಯದ 
ಭಾವಕ್ಕೂ ಎತ್ತನಿಂದೆತ್ತ ಸಂಬಂಧ...??????
ಮನಸಿನ ಮಾತಿಗೂ ಕನಸಿನ 
ಕಲ್ಪನೆಗೂ ಎತ್ತನಿಂದೆತ್ತ ಸಂಬಂಧ...??????

ಮನಸು ನೊಂದರೆ ಕಣ್ಣಲ್ಲಿ
ನೀರು ಬರತ್ತೆ
ಸವಿಗನಸು ಕಂಡರೆ
ಮನಸಿಗೆ ಸಂತಸವಾಗತ್ತೆ

ಮನಸನ್ನು ಕಂಡವರಿಲ್ಲ
ಕನಸನ್ನು ಕಾಣದವರಿಲ್ಲ
ಆದರೂ ಇವೆರಡರ ಬಂಧ
ನಮ್ಮನ್ನು ಎಂದೂ ಬಿಡದ ಅನುಬಂಧ

ಏನಿದು ಬದುಕಿನ ಮಾಯೆ.....???????

ಮೋಹ


ಇರುಳ ಕತ್ತಲೆಯಲ್ಲಿ ಹೇಗೆ 
ಹುಡುಕಲಿ ನಿನ್ನ ನೆರಳನ್ನು 

ಮನ ಸಾಗರದ ಪ್ರಳಯದಲ್ಲಿ ಹೇಗೆ 
ಹುಡುಕಲಿ ಪ್ರೀತಿಯ ಮುತ್ತನ್ನು 

ತತ್ತರಿಸುವ ಬಿರುಗಾಳಿಯ ಭಯದಲ್ಲಿ
ಹೇಗೆ ಬಯಸಲಿ ತಂಗಾಳಿಯನ್ನು

ಕಾರಿರುಳು ಕಳೆದು ಹೊಸ ಉದಯ ಮುಡಿ
ಕಡಲು ಶಾಂತವಾಗಿ ತೆಳು ಆಲೆಯು ಕಾಡಿ

ಬಿರುಗಾಳಿ ಹೋಗಿ ತಂಗಾಳಿ ಬಂದರೂ
ನನ್ನೀ ನೆನಪಿನ ಸೆಲೆ ಕಾತರ ನಿನಗಾಗಿಯೇ

ನಿನ್ನ ಜೊತೆಯನ್ನು ಬಯಸುವೆ
ನಿನ್ನ ಸಹಚಾರಿಣಿಯಾಗಿರುವೆ

Sunday, 3 February 2013

ಅವಳ ಇವನು

ಅವಳ  ಗೆಜ್ಜೆಯ ನಾದಕೆ 
ಇವನು ಹೆಜ್ಜೆಯ ಹಾಕುತ್ತ 
ಬೆನ್ನು ಬಿಡದ ನೆರಳ ಹಾಗೆ ಸಾಗಿದ 

ಅವಳು ನುಡಿಯದ ವಾಣಿಗೆ  
ಇವನು ದನಿಯಾಗಿ ಪೋಣಿಸಿದ  
ಮಾತಿನ ಮುತ್ತುಗಳನ್ನ 

ಅವಳು ನಾದವ ಹೊಮ್ಮವ ವೀಣೆ 
ಇವನು ತಂತಿಯ ಮೀಟುವ ವೈಣಿಕ 
ಸುರಿಸಿದ ಮಧುರ ನಾದದ ಮಳೆಯ 

ಅವಳ ಮುಗ್ಧ ಕಂಗಳ ಚೆಲುವ ಕಂಡು 
ಇವನಾದನು ಆಕೆಯ ಪ್ರೀತಿಯ ಗೆಳೆಯ 
ಇಬ್ಬರು ನೆನೆದರು ಒಲವಿನ ಮಳೆಯಲಿ 

ಚಿಗುರೊಡೆಯಿತು ಪ್ರೀತಿಯ ಬಳ್ಳಿ
ವರ್ಣಿಸಲು  ಪದಗಳೇ ಸಿಗಲಾರದು  
ಅವಳ ಇವನ ಅನನ್ಯ ಅನುಬಂಧ


ಜೀವನ 
************************
ಸ್ನೇಹ ಎಂಬುದು ಅಮರ 
ಪ್ರೀತಿ ಎಂಬುದು ಮಧುರ 
ಸುಖ ಎಂಬುದು ಕ್ಷಣಿಕ 
ದುಃಖ  ಎಂಬುದು ಅಲ್ಪ 
ಆದರೆ ಇವೆಲ್ಲವುಗಳ ಮಿಶ್ರಣ 
ಎಂಬ ಜೀವನವೇ ಶಾಶ್ವತ 

ಅಮ್ಮ 
*************
ಅನ್ನ  ನೀಡುವ ಅಮ್ಮ ಭೂಮಿಯಮ್ಮ 
ಮಾತು ಕಲಿಸುವ ಅಮ್ಮ ಕನ್ನಡವಮ್ಮ 
ದಾಹ ನೀಗುವ ಅಮ್ಮ ಕಾವೇರಮ್ಮ 
ಇಂತಹ ಅಮ್ಮಂದಿರ ಪಡೆದ 
ನಾವೇ ಪುಣ್ಯವಂತರಮ್ಮ 

ಪ್ರೀತಿ 
************
ಬಾಳಲ್ಲಿ ಇರಬೇಕು ಪ್ರೀತಿ 
ಅದೇ ಬಾಳಿಗೆ ಸ್ಪೂರ್ತಿ 
ಬಾಳಲ್ಲಿ ಇದ್ದರೆ ಪ್ರೀತಿ 
ಆಗುವುದು ನಮ್ಮ ಬಾಳು ನಿರ್ಭೀತಿ 

ಸ್ನೇಹ ಪ್ರೀತಿ 
***************
ಸ್ನೇಹಕ್ಕೆ ಶರಣಾಗದವರಿಲ್ಲ 
ಪ್ರೀತಿಗೆ ಸೋಲದವರಿಲ್ಲ 
ಸ್ನೇಹ ಪ್ರೀತಿ ಅನುಭವಿಸುವವರ 
ಬಾಳು  ಹಸನಾಗದಿರುವುದಿಲ್ಲ 

ಪ್ರೀತಿಯ ಹುಡುಕಾಟ 
************************
ಹುಡುಕುತ್ತ ಹೋದೆ ನನ್ನ ಪ್ರೀತಿಯನ್ನು 
ಅದು ಸಿಗುವ ಲಕ್ಷಣ ಇಲ್ಲ ನನಗಿನ್ನೂ 
ಆದರೆ ಬಿಡುವುದಿಲ್ಲ ನನ್ನ ಪ್ರೀತಿಯನ್ನು 
ಆ ಪ್ರೀತಿ ಸಿಗುವುದೇ ನನಗಿನ್ನೂ ...?????